ನವದೆಹಲಿ: 76ನೆಯ ಗಣರಾಜ್ಯೋತ್ಸವದ ದಿನ ರಾಷ್ಟ್ರವು ತನ್ನ ಮಿಲಿಟರಿ ಶಕ್ತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಿದೆ.
ಅಲ್ಲದೆ, ದೇಶವು ಸಂವಿಧಾನವನ್ನು ಜಾರಿಗೆ ತಂದ ವಜ್ರಮಹೋತ್ಸವ ಆಚರಣೆಯ ಅಂಗವಾಗಿ, ದೇಶದ ಪರಂಪರೆ ಹಾಗೂ ವಿಕಾಸದ ಸಾಂಕೇತಿಕ ಸಂಗಮವನ್ನು ಕೂಡ ಪ್ರದರ್ಶಿಸಲಾಗುತ್ತದೆ.
ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೊನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಭಾಗಿಯಾಗಲಿದ್ದಾರೆ. ಸುಬಿಯಾಂತೊ ಅವರು ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಇಂಡೊನೇಷ್ಯಾದ ನಾಲ್ಕನೆಯ ಅಧ್ಯಕ್ಷ.
ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಆಗಿರುವುದು ಈ ಬಾರಿಯ ಆಚರಣೆಯ ಕೇಂದ್ರಬಿಂದು ಆಗಿರಲಿದೆ. ಈ ಬಾರಿ ಸ್ತಬ್ಧಚಿತ್ರಗಳ ವಿಷಯ ‘ಸ್ವರ್ಣಿಮ ಭಾರತ: ಪರಂಪರೆ ಮತ್ತು ವಿಕಾಸ’ ಎಂಬುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.