ADVERTISEMENT

ತಂದೆಯ ಗುಂಡೇಟಿಗೆ ಟೆನಿಸ್ ಆಟಗಾರ್ತಿ ರಾಧಿಕಾ ಸಾವು:ನಟಿ ರಿಚಾ ಚಡ್ಡಾ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:44 IST
Last Updated 15 ಜುಲೈ 2025, 7:44 IST
<div class="paragraphs"><p>ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಮತ್ತು&nbsp;ಬಾಲಿವುಡ್ ನಟಿ ರಿಚಾ ಚಡ್ಡಾ</p></div>

ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಮತ್ತು ಬಾಲಿವುಡ್ ನಟಿ ರಿಚಾ ಚಡ್ಡಾ

   

ನವದೆಹಲಿ: ಹರಿಯಾಣದ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ತಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ, ನಿರ್ಮಾಪಕಿ ರಿಚಾ ಚಡ್ಡಾ ಪ್ರತಿಕ್ರಿಯಿಸಿದ್ದಾರೆ.

ಜುಲೈ 10ರಂದು ಗುರುಗ್ರಾಮದ ಸೆಕ್ಟರ್ 57ರ ಸುಶಾಂತ್ ಲೋಕ್ ಪ್ರದೇಶದಲ್ಲಿರುವ ಮನೆಯಲ್ಲಿ ಈ ಕೃತ್ಯ ನಡೆದಿತ್ತು. 25 ವರ್ಷದ ರಾಧಿಕಾ ಅವರನ್ನು ಅವರ ತಂದೆ ದೀಪಕ್ ಯಾದವ್ (49) ಗುಂಡಿಕ್ಕಿ ಕೊಂದಿದ್ದರು.

ADVERTISEMENT

ರಾಧಿಕಾ ಅವರ ಸ್ನೇಹಿತ ಎಂದು ಹೇಳಿಕೊಂಡ ಹಿಮಾಂಶಿಖಾ ಸಿಂಗ್ ರಜಪೂತ್ ಮಾತನಾಡಿರುವ ವಿಡಿಯೊವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ನಟಿ ರಿಚಾ ಚಡ್ಡಾ, ‘ನಿಮ್ಮದೇ ಮಗುವನ್ನು ಕೊಂದರೆ ಅದೇನು ಗೌರವದ ಸಂಕೇತವಲ್ಲ. ಹಿಂದೆ ಯಾರೋ ಏನೋ ಹೇಳಿದ್ದರು ಎಂದು ಈಗ ದೀಪಕ್ ಎಸಗಿರುವ ಕೃತ್ಯಕ್ಕೆ ಅವರನ್ನು ಜಗತ್ತು ಹೇಡಿ ಎಂದೇ ಪರಿಗಣಿಸುತ್ತದೆ. ಇತಿಹಾಸ ಪುಟಗಳಲ್ಲಿ ದೀಪಕ್ ಯಾದವ್‌ ಒಬ್ಬ ಸೋತ ವ್ಯಕ್ತಿ ಹಾಗೂ ಹೇಡಿ ಎಂದೇ ದಾಖಲಾಗುತ್ತದೆ’ ಎಂದು ಬೇಸರ ಹೊರಹಾಕಿದ್ದಾರೆ.

ರಾಧಿಕಾ ಕೊಲೆ ಪ್ರಕರಣ ಸಂಬಂಧ ಆಕೆಯ ತಂದೆ ದೀಪಕ್‌ ಯಾದವ್‌ ಅವರನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಪರವಾನಗಿ ಹೊಂದಿರುವ ಪಿಸ್ತೂಲ್‌ ವಶಪಡಿಸಿಕೊಂಡಿದ್ದಾರೆ. ರಾಧಿಕಾ ಅವರ ಬೆನ್ನಿಗೆ ಐದಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.