ADVERTISEMENT

ವೈಯಕ್ತಿಕ ತೇಜೋವಧೆ ಮಾಡುವುದು RSS ಗುಣ; ಗಾಂಧಿಯನ್ನೂ ಬಿಡಲಿಲ್ಲ: ರಾಹುಲ್ ಗಾಂಧಿ

ಪಿಟಿಐ
Published 26 ಆಗಸ್ಟ್ 2025, 10:51 IST
Last Updated 26 ಆಗಸ್ಟ್ 2025, 10:51 IST
   

ಅರರಿಯಾ(ಬಿಹಾರ): ‘ಯಾರನ್ನಾದರೂ ಗುರಿ ಮಾಡಿಕೊಂಡು ಅವರ ವೈಯಕ್ತಿಕ ತೇಜೋವಧೆ ಮಾಡುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮೂಲ ಗುಣವಾಗಿದೆ. ಮಹಾತ್ಮ ಗಾಂಧಿಯನ್ನೂ ಕೂಡ ಅವರು ಬಿಡಲಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಂಗಳವಾರ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ವಿಡಿಯೊ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ.

‘ವೈಯಕ್ತಿಕ ತೇಜೋವಧೆ ಮಾಡುವುದು ‘ಆರ್‌ಎಸ್‌ಎಸ್’ಗೆ ಅಭ್ಯಾಸವಾಗಿದೆ. ಗಾಂಧಿಯವರನ್ನು ಕೂಡ ಲೆಕ್ಕವಿಲ್ಲದಷ್ಟು ಬಾರಿ ಅವಮಾನಿಸಿದ್ದಾರೆ. ಅವರ ಕುರಿತು ಸುಳ್ಳುಗಳನ್ನು ಹಬ್ಬಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ADVERTISEMENT

‘ಯಾತ್ರೆ, ಮತ ಕಳ್ಳತನ ಹಾಗೂ -ಗಾಂಧೀಜಿ.. ಬಿಸಿ ಚಹಾ ಮತ್ತು ಪಕೋಡದ ಜೊತೆಗೆ ಮೈತ್ರಿಕೂಟದ ನಾಯಕರೊಂದಿಗೆ ರಾಜಕೀಯ ಚರ್ಚೆ’ ಎಂದು ವಿಡಿಯೊಗೆ ಅಡಿ ಬರಹ ಹಾಕಿದ್ದಾರೆ.

ವಿಡಿಯೊದಲ್ಲಿ ರಾಹುಲ್‌ ಗಾಂಧಿ ಜೊತೆ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಹಾಗೂ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಅವರು ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.