
ನವದೆಹಲಿ: ‘ಎಸ್‌ಐಆರ್ ಎಲ್ಲೆಲ್ಲಿ ನಡೆಯುತ್ತದೆಯೊ ಅಲ್ಲೆಲ್ಲಾ ಮತಗಳ್ಳತನ ನಡೆಯುತ್ತದೆ. ಗುಜರಾತ್‌ನಲ್ಲಿ ನಡೆಯುತ್ತಿರುವುದು ಆಡಳಿತಾತ್ಮಕವಾದ ಎಸ್‌ಐಆರ್ ಪ್ರಕ್ರಿಯೆ ಅಲ್ಲ. ಅಲ್ಲಿ ನಡೆಯುತ್ತಿರುವುದು ಯೋಜಿತ ಸಂಘಟಿತ ಮತ್ತು ಕಾರ್ಯತಂತ್ರದ ಭಾಗವಾದ ಮತಗಳ್ಳತನ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ನಿರ್ದಿಷ್ಟ ಸಮುದಾಯದವರನ್ನು ನಿರ್ದಿಷ್ಟ ಬೂತ್‌ಗಳಿಂದ ಜನರನ್ನು ಆಯ್ಕೆ ಮಾಡಿ ಪಟ್ಟಿಯಿಂದ ಅಳಿಸಿ ಹಾಕಲಾಗುತ್ತಿತ್ತು. ಇವರೆಲ್ಲ ಕಾಂಗ್ರೆಸ್‌ನ ಮತದಾರರು. ರಾಜಕೀಯವಾಗಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದಾದರೆ ಅಂಥಲ್ಲಿಂದ ಮತದಾರರನ್ನು ಅಳಿಸಿಬಿಡಲಾಗುತ್ತದೆ. ಇದೇ ರೀತಿಯಲ್ಲಿಯೇ ಅಳಂದದಲ್ಲಿ ಮತ್ತು ರಜೂರಾದಲ್ಲಿ ಮತಗಳ್ಳತನ ನಡೆದಿದ್ದವು’ ಎಂದರು.
‘ಗುಜರಾತ್‌ನಲ್ಲಿ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಜ.18 ಕೊನೇ ದಿನವಾಗಿತ್ತು. ಜ.15ರವರೆಗೆ ಕೆಲವೇ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಆದರೆ ಈ ಬಳಿಕ ದೊಡ್ಡ ಮಟ್ಟದ ಕಳ್ಳಾಟ ನಡೆಯಿತು. ಜ.15ರ ಬಳಿಕ 12 ಲಕ್ಷ ಆಕ್ಷೇಪಣೆಗಳು ಒಮ್ಮೆಲೆ ಬಂದವು’ ಎಂದು ಗುಜರಾತ್‌ನ ಕಾಂಗ್ರೆಸ್ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಹುಲ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.