ADVERTISEMENT

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಅನಿವಾಸಿ ಭಾರತೀಯ ರಾಜಕಾರಣಿ': ತೇಜಸ್ವಿ ಸೂರ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 11:22 IST
Last Updated 10 ಡಿಸೆಂಬರ್ 2025, 11:22 IST
<div class="paragraphs"><p>ತೇಜಸ್ವಿ ಸೂರ್ಯ ಹಾಗೂ ರಾಹುಲ್‌ ಗಾಂಧಿ</p></div>

ತೇಜಸ್ವಿ ಸೂರ್ಯ ಹಾಗೂ ರಾಹುಲ್‌ ಗಾಂಧಿ

   

ಕೃಪೆ: ಪಿಟಿಐ

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು 'ಅನಿವಾಸಿ ಭಾರತೀಯ ರಾಜಕಾರಣಿ' ಎಂದು ಸಂಸದ ತೇಜಸ್ವಿ ಸೂರ್ಯ ಬುಧವಾರ ಕಾಲೆಳೆದಿದ್ದಾರೆ.

ADVERTISEMENT

ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್‌ 1ರಂದು ಆರಂಭವಾಗಿದ್ದು, 19ರ ವರೆಗೆ ನಡೆಯಲಿದೆ. ಇದೇ ಅವಧಿಯಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ರಾಹುಲ್‌ ಅವರ ನಡೆಯನ್ನು ತೇಜಸ್ವಿ ಟೀಕಿಸಿದ್ದಾರೆ.

ರಾಹುಲ್‌ ಗಾಂಧಿ 'ಅನಿವಾಸಿ ಭಾರತೀಯ ರಾಜಕಾರಣಿ'. ತನ್ನ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುವ ವಿರೋಧ ಪಕ್ಷದ ಅಗತ್ಯ ಭಾರತಕ್ಕಿದೆ ಎಂದು ತೇಜಸ್ವಿ ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್‌ ಸಂಸದ ರಾಹುಲ್‌ ಅವರು, ಡಿಸೆಂಬರ್‌ 15ರಿಂದ 20ರವರೆಗೆ ಜರ್ಮನಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಅವರು, ಜರ್ಮನಿಯಲ್ಲಿ ನೆಲೆಸಿರುವ ಭಾರತೀಯ ಮೂಲದವರು ಹಾಗೂ ಅಲ್ಲಿನ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.