ADVERTISEMENT

ಆರ್ಥಿಕ ಪ್ಯಾಕೇಜ್‌ ಮರುಪರಿಶೀಲಿಸಲು ಪ್ರಧಾನಿ ಮೋದಿಗೆ ರಾಹುಲ್‌ ಮನವಿ

ಏಜೆನ್ಸೀಸ್
Published 16 ಮೇ 2020, 8:33 IST
Last Updated 16 ಮೇ 2020, 8:33 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ    

ನವದೆಹಲಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಪ್ಯಾಕೇಜ್‌ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ನಿರ್ಧಾರವನ್ನುಮರುಪರಿಶೀಲಿಸುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮನವಿ ಮಾಡಿದ್ದಾರೆ.

‘ಇಂದು ಬಡವರಿಗೆ ಹಣದ ಅಗತ್ಯಇದೆ. ಹಾಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(ಎಂಜಿಎನ್‌ಆರ್‌ಇಜಿಎ) ಅವರಿಗೆ200 ದಿನಗಳ ಕೆಲಸವನ್ನು ನೀಡಬೇಕು. ಜೊತೆಗೆ ರೈತರಿಗೆ ಹಣವನ್ನು ನೇರವಾಗಿ ಬ್ಯಾಂಕ್‌ ಖಾತೆ ವರ್ಗಾವಣೆ ಮಾಡಬೇಕು’ ಆಗ್ರಹಿಸಿದ್ದಾರೆ.

ಹಣ ನೀಡದಿರಲು ಕಾರಣ ರೇಟಿಂಗ್‌ಗಳು ಎಂದು ನಾನು ಕೇಳಿದ್ದೇನೆ. ಇಂದು ನಾವು ವಿತ್ತೀಯ ಕೊರತೆಯನ್ನು ಹೆಚ್ಚಿಸಿದರೆ, ವಿದೇಶಿ ಏಜೆನ್ಸಿಗಳು ನಮ್ಮ ರೇಟಿಂಗ್‌ಗಳನ್ನು ಕಡಿಮೆ ಮಾಡುತ್ತವೆ ಎಂದು ಹೇಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಕೋವಿಡ್‌–19 ಪಿಡುಗಿನಿಂದ ತತ್ತರಿಸಿರುವ ಭಾರತದ ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬುವಂತಹ ನಿಟ್ಟಿನಲ್ಲಿ ಪ್ರಧಾನಿ ಮೋದಿ, ₹20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್‌ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.