ADVERTISEMENT

ಭಾರತ- ಚೀನಾ ಗಡಿ ವಿಷಯದಲ್ಲಿ ಮೋದಿ ದೇಶದ ದಾರಿ ತಪ್ಪಿಸಿದ್ದಾರೆ: ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 12:16 IST
Last Updated 15 ಸೆಪ್ಟೆಂಬರ್ 2020, 12:16 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಭಾರತದ ಮೇಲೆ ಚೀನಾ ಅತಿಕ್ರಮಣ ಮಾಡಿದೆ ಎಂಬ ವಿಷಯದ ಕುರಿತುಪ್ರಧಾನಿ ನರೇಂದ್ರ ಮೋದಿ ಅವರು ದೇಶದ ದಾರಿ ತಪ್ಪಿಸಿರುವುದು ರಕ್ಷಣಾ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

ನಮ್ಮ ದೇಶ ಸದಾ ಭಾರತೀಯ ಸೇನೆ ಜತೆ ನಿಂತಿದೆ ಮತ್ತು ಎಂದಿಗೂ ನಿಲ್ಲುತ್ತದೆ. ಆದರೆ ಮೋದಿಯವರೇ ನೀವು ಯಾವತ್ತು ಚೀನಾದ ವಿರುದ್ಧ ನಿಲ್ಲುತ್ತೀರಿ? ಚೀನಾದ ಕೈಯಿಂದ ನಮ್ಮ ಭೂಭಾಗವನ್ನು ಯಾವಾಗ ವಾಪಸ್ ಪಡೆಯುತ್ತೀರಿ? ಚೀನಾದ ಹೆಸರು ಉಲ್ಲೇಖಿಸಲು ಭಯಪಡಬೇಡಿ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.