ADVERTISEMENT

ಮೆಸ್ಸಿ ಭೇಟಿಗಾಗಿ ಇಂದು ಹೈದರಾಬಾದ್‌ಗೆ ತೆರಳಲಿರುವ ರಾಹುಲ್ ಗಾಂಧಿ

ಪಿಟಿಐ
Published 13 ಡಿಸೆಂಬರ್ 2025, 6:03 IST
Last Updated 13 ಡಿಸೆಂಬರ್ 2025, 6:03 IST
<div class="paragraphs"><p>ಲಯೊನೆಲ್ ಮೆಸ್ಸಿ ಮತ್ತು ರಾಹುಲ್ ಗಾಂಧಿ</p></div>

ಲಯೊನೆಲ್ ಮೆಸ್ಸಿ ಮತ್ತು ರಾಹುಲ್ ಗಾಂಧಿ

   

ಹೈದರಾಬಾದ್‌: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು (ಶನಿವಾರ) ಸಂಜೆ ಇಲ್ಲಿನ ಆರ್‌ಜಿಐ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ‘GOAT ಇಂಡಿಯಾ ಟೂರ್’ ಕಾರ್ಯಕ್ರಮದಲ್ಲಿ ಫುಟ್‌ಬಾಲ್‌ ದಂತಕಥೆ ಲಯೊನೆಲ್ ಮೆಸ್ಸಿ ಅವರೊಂದಿಗೆ ಭಾಗವಹಿಸಲಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಿಂಗರೇಣಿ ಆರ್‌ಆರ್ 9 ಮತ್ತು ಅಪರ್ಣಾ-ಮೆಸ್ಸಿ ಆಲ್ ಸ್ಟಾರ್ಸ್ ತಂಡಗಳ ನಡುವೆ ಸೌಹಾರ್ದ ಪಂದ್ಯ ನಡೆಯಲಿದೆ. 15ರಿಂದ 20 ನಿಮಿಷಗಳ ಕಾಲ ಪಂದ್ಯ ನಡೆಯಲಿದೆ. ಪಂದ್ಯ ಆರಂಭಕ್ಕೂ ಐದು ನಿಮಿಷಗಳ ಮೊದಲು ಮೆಸ್ಸಿ ಅವರೊಂದಿಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಚೆಂಡನ್ನು ಡ್ರಿಬಲ್ ಮಾಡಲಿದ್ದಾರೆ.

ADVERTISEMENT

ಸಂಜೆ 4.30ಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿಯಲಿರುವ ರಾಹುಲ್‌ ಗಾಂಧಿ ಅವರು, ಮೆಸ್ಸಿ ತಂಗಲಿರುವ ತಾಜ್ ಫಲಖುನಾಮ ಪ್ಯಾಲೇಸ್ ಹೋಟೆಲ್‌ಗೆ ತೆರಳಲಿದ್ದಾರೆ. ಪಂದ್ಯ ಮುಗಿಯುತ್ತಲೇ ದೆಹಲಿಗೆ ವಾಪಸ್‌ ಆಗಲಿದ್ದಾರೆ ಎಂದು ಹೇಳಿದ್ದಾರೆ.

ಮೆಸ್ಸಿ ಮತ್ತು ರಾಹುಲ್ ಗಾಂಧಿ ಅವರ ಭೇಟಿ ಸಲುವಾಗಿ ಆರ್‌ಜಿಐ ಕ್ರಿಕೆಟ್ ಕ್ರೀಡಾಂಗಣದಲ್ಲಿ ವ್ಯಾ‍ಪಕ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದ ಸುತ್ತ ಸುಮಾರು 3 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ರಾಚಕೊಂಡ ಪೊಲೀಸ್ ಆಯುಕ್ತ ಸುಧೀರ್ ಬಾಬು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.