ADVERTISEMENT

ಭಾರತ–ಬಾಂಗ್ಲಾ ನಡುವೆ ಸರಕು ಸಾಗಣೆ ರೈಲ್ವೆ ಸೇವೆ ಭಾನುವಾರ ಆರಂಭ

ಪಿಟಿಐ
Published 31 ಜುಲೈ 2021, 12:22 IST
Last Updated 31 ಜುಲೈ 2021, 12:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಸರಕು ಸಾಗಣೆ ರೈಲ್ವೆ ಸಂಚಾರ ಸೇವೆಯು ಹಲ್ದಿಬಾರಿ–ಚಿಲ್ಹಾಹಟಿ ಮಾರ್ಗದಲ್ಲಿ ಭಾನುವಾರ ಆರಂಭವಾಗಲಿದೆ. 1965ರಿಂದ ಈ ಸೇವೆಯು ಸ್ಥಗಿತವಾಗಿತ್ತು.

ಮರು ಅಭಿವೃದ್ಧಿಪಡಿಸಲಾಗಿದ್ದ ಈ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ಕಳೆದ ವರ್ಷ ಡಿಸೆಂಬರ್‌ 17ರಂದು ಉದ್ಘಾಟಿಸಿದ್ದರು.

ಈ ಮಾರ್ಗದಲ್ಲಿ ಜಲ್ಲಿಕಲ್ಲುಗಳನ್ನು ಹೊತ್ತ ರೈಲು ಪಶ್ಚಿಮ ಬಂಗಾಳದ ಚಿಲಾಹಟಿಯಿಂದ ಬಾಂಗ್ಲಾದೇಶದ ನಿಲ್‌ಫಮಾರಿ ಜಿಲ್ಲೆಗೆ ತೆರಳಲಿದೆ ಎಂದು ನಾರ್ಥ್‌ಈಸ್ಟ್‌ ಫ್ರಂಟಿಯರ್ ರೈಲ್ವೆಯ ವಕ್ತಾರರು ತಿಳಿಸಿದರು.

ADVERTISEMENT

ಇದರ ಹೊರತಾಗಿ ಇನ್ನೂ ಐದು ರೈಲ್ವೆ ಮಾರ್ಗಗಳಲ್ಲಿ ಉಭಯ ದೇಶಗಳ ನಡುವೆ ಸೇವೆ ಆರಂಭವಾಗಲಿದೆ. ಸೇವೆಯು ಭಾನುವಾರ ಆರಂಭವಾಗುವ ಮಾರ್ಗದಲ್ಲಿನ ಅಂತರ ಹಲ್ದಿಬಾರಿಯಿಂದ ಅಂತರರಾಷ್ಟ್ರೀಯ ಗಡಿವರೆಗೂ 4.5 ಕಿ.ಮೀ, ತದನಂತರ ಚಿಲ್ಹಾಹಟಿಯವರೆಗೆ 7.5 ಕಿ.ಮೀ.ಗಳು ಎಂದು ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.