ADVERTISEMENT

ರೈಲು: ಎಲ್ಲ ಕೋಚ್‌ಗಳಿಗೂ ಕ್ಯಾಮೆರಾ ಅಳವಡಿಕೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 0:24 IST
Last Updated 14 ಜುಲೈ 2025, 0:24 IST
   

ನವದೆಹಲಿ: ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ರೈಲ್ವೆಯ ಎಲ್ಲ 74,000 ಬೋಗಿಗಳು ಮತ್ತು ಎಂಜಿನ್‌ನಲ್ಲಿ ಲೋಕೋಪೈಲಟ್‌ಗಳು ಇರುವಂತಹ 15,000 ಸ್ಥಳಗಳಲ್ಲಿ (ಲೋಕೋಮೋಟಿವ್‌) ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಆದೇಶಿಸಿದ್ದಾರೆ. 

ರೈಲ್ವೆ ಪ್ರಯಾಣಿಕರ ಗೋಪ್ಯತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಬೋಗಿಗಳ ಬಾಗಿಲು ಬಳಿಯ ಸಾಮಾನ್ಯ ಸಂಚಾರ ಪ್ರದೇಶದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. 

ಪ್ರತಿ ರೈಲ್ವೆ ಕೋಚ್‌ನಲ್ಲಿ ನಾಲ್ಕು ಉತ್ತಮ ಗುಣಮಟ್ಟದ ಸಿ.ಸಿ.ಟಿ.ವಿ ಕ್ಯಾಮೆರಾಗಳು (ಪ್ರತಿ ಪ್ರವೇಶ ದ್ವಾರದ ಬಳಿ ಎರಡು) ಹಾಗೂ ಪ್ರತಿ ‘ಲೋಕೋಮೋಟಿವ್‌’ಗಳಲ್ಲಿ ಅದೇ ರೀತಿಯ ಆರು ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದು ‘ಲೋಕೋಮೋಟಿವ್‌’ನ ಮುಂಭಾಗ, ಹಿಂಭಾಗ ಮತ್ತು ಎರಡೂ ಬದಿಗಳ ದೃಶ್ಯಗಳನ್ನು ಸೆರೆಹಿಡಿಯುತ್ತದೆ ಎಂದು ಅದು ಹೇಳಿದೆ. 

ADVERTISEMENT

ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸುವುದರ ಜತೆಗೆ ನಿಲ್ದಾಣಗಳು ಮತ್ತು ರೈಲುಗಳ ಸುತ್ತಮುತ್ತ ಕಿಡಿಗೇಡಿಗಳು ದುಷ್ಕೃತ್ಯ ನಡೆಸುವುದನ್ನು ತಡೆಯಲು ಈ ಕ್ರಮ ನೆರವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.