ADVERTISEMENT

ಮುಂಬೈ: ಉಪನಗರ ರೈಲು ಸಂಚಾರ ಪುನರಾರಂಭ

ಪಿಟಿಐ
Published 15 ಜೂನ್ 2020, 9:09 IST
Last Updated 15 ಜೂನ್ 2020, 9:09 IST
ಉಪನಗರ ರೈಲು ಸೇವೆ-ಸಾಂದರ್ಭಿಕ ಚಿತ್ರ
ಉಪನಗರ ರೈಲು ಸೇವೆ-ಸಾಂದರ್ಭಿಕ ಚಿತ್ರ   

ಮುಂಬೈ:ಸಿಬ್ಬಂದಿ, ನೌಕರರ ಸಂಚಾರಕ್ಕಾಗಿ ಇಲ್ಲಿ ಸಬರ್ಬನ್‌ ರೈಲು (ಉಪನಗರಗಳಿಗೆ) ಸೇವೆಯನ್ನು ಸೋಮವಾರ ಪುನರಾರಂಭಿಸಲಾಗಿದೆ ಎಂದು ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಅಗತ್ಯ ಸಿಬ್ಬಂದಿಯೆಂದು ಸೂಚಿಸಿರುವವರು ಮಾತ್ರ ಇದರಲ್ಲಿ ಪ್ರಯಾಣಿಸಬಹುದು. ಆಯ್ದ ಮಾರ್ಗಗಳಲ್ಲಿ ಮಾತ್ರ ರೈಲು ಸಂಚಾರ ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂತಹ ಮೊದಲ ರೈಲು ಸೋಮವಾರ ಬೆಳಿಗ್ಗೆ ವಿರಾರ್‌ನಿಂದ ಚರ್ಚ್‌ಗೇಟ್‌ಗೆ ಪಯಣಿಸಿತು.ಈ ರೈಲುಗಳಲ್ಲಿ 1200 ಮಂದಿ ಪಯಣಿಸಬಹುದಾದರೂ ಈಗ 700 ಜನರಿಗೆ ಮಾತ್ರ ಅವಕಾಶ ಇರುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.