ADVERTISEMENT

ಬೇಸಿಗೆಯಲ್ಲಿ ರೈಲುಗಳ ಹೆಚ್ಚುವರಿ ಸಂಚಾರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 13:32 IST
Last Updated 19 ಏಪ್ರಿಲ್ 2024, 13:32 IST
   

ನವದೆಹಲಿ: ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇರುವುದರಿಂದ ದೇಶದಾದ್ಯಂತ ರೈಲುಗಳು 9,111 ಬಾರಿ ಹೆಚ್ಚುವರಿಯಾಗಿ ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ಶುಕ್ರವಾರ ತಿಳಿಸಿದೆ.

2023ಕ್ಕೆ ಹೋಲಿಸಿದರೆ ಇದು ಗಣನೀಯ ಹೆಚ್ಚಳ. ಆ ವರ್ಷ ಬೇಸಿಗೆ ಅವಧಿಯಲ್ಲಿ ರೈಲುಗಳು ಹೆಚ್ಚುವರಿಯಾಗಿ 6,369 ಬಾರಿ ಸಂಚರಿಸಿದ್ದವು. ಈ ಬಾರಿ ಅದಕ್ಕಿಂತ 2,742 ಬಾರಿ ಹೆಚ್ಚುವರಿಯಾಗಿ ಸಂಚರಿಸಲಿವೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್‌, ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತದೆ. ಹೆಚ್ಚುವರಿ ರೈಲುಗಳು ಈ ಭಾಗಗಳಲ್ಲಿ ಸಂಚರಿಸಲಿವೆ.

ADVERTISEMENT

ಮಾಧ್ಯಮ ವರದಿಗಳು, ಸಾಮಾಜಿಕ ಜಾಲತಾಣಗಳು, ರೈಲ್ವೆ ಸಹಾಯವಾಣಿ ಆಧರಿಸಿ ಹೆಚ್ಚುವರಿ ರೈಲು ಅಥವಾ ರೈಲುಗಳ ಹೆಚ್ಚುವರಿ ಸಂಚಾರ ಸೇವೆಯನ್ನು ಒದಗಿಸಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.