ADVERTISEMENT

ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್‌ ವ್ಯವಸ್ಥೆ ಉನ್ನತೀಕರಿಸಲು ರೈಲ್ವೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 13:32 IST
Last Updated 14 ಆಗಸ್ಟ್ 2022, 13:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಆನ್‌ಲೈನ್‌ ಪ್ಯಾಸೆಂಜರ್‌ ಟಿಕೆಟ್‌ ಬುಕ್ಕಿಂಗ್ ವ್ಯವಸ್ಥೆಯನ್ನು ಉನ್ನತೀಕರಿಸಲು ರೈಲ್ವೆ ಸಚಿವಾಲಯ ಮುಂದಾಗಿದೆ.

ರೈಲ್ವೆ ಮೇಲಿನ ಸಂಸದೀಯ ಸ್ಥಾಯಿ ಸಮಿತಿಗೆ ರೈಲ್ವೆ ಸಚಿವಾಲಯ ಈ ಮಾಹಿತಿ ನೀಡಿದೆ.ಬೇಡಿಕೆ ಹೆಚ್ಚುತ್ತಾ ಬಂದಂತೆ ಕಾಲಕಾಲಕ್ಕೆ ನೆಕ್ಷ್ಟ್‌ ಜನರೇಶನ್‌ ಇ–ಟಿಕೆಟಿಂಗ್‌ (ಎನ್‌ಜಿಇಟಿ) ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದೆ. 2016–17ರಲ್ಲಿ ಈ ವ್ಯವಸ್ಥೆ ಮೂಲಕ ಪ್ರತಿ ನಿಮಿಷಕ್ಕೆ 15,000 ಟಿಕೆಟ್‌ ಬುಕ್‌ ಮಾಡಲಾಗುತ್ತಿತ್ತು. 2017–18ರಲ್ಲಿ ಇದನ್ನು 18,000ಕ್ಕೆ ಏರಿಕೆ ಮಾಡಲಾಗಿದೆ.

2018–19ರಲ್ಲಿ 20,000 ಟಿಕೆಟ್‌ ಬುಕ್‌ ಮಾಡುವಂತೆ ಉನ್ನತೀಕರಿಸಲಾಗಿದೆ. ಸದ್ಯ ಐಆರ್‌ಸಿಟಿಸಿ ಮೂಲಕ ನಿಮಿಷಕ್ಕೆ 25,000 ಟಿಕೆಟ್‌ ಬುಕ್‌ ಮಾಡಬಹುದು. 2020 ಮಾರ್ಚ್‌ 5ರಂದು ದಾಖಲೆಯ 26,458 ಟಿಕೆಟ್‌ಗಳನ್ನು ಬುಕ್‌ ಮಾಡಲಾಗಿತ್ತು ಎಂದು ರೈಲ್ವೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.