ADVERTISEMENT

ರಾಷ್ಟ್ರರಾಜಧಾನಿಯ ವಾಯುಗುಣಮಟ್ಟ ಸುಧಾರಿಸಿದ ಮಳೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 15:53 IST
Last Updated 10 ಸೆಪ್ಟೆಂಬರ್ 2023, 15:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ (ಪಿಟಿಐ): ತುಂತುರು ಮಳೆ ಮತ್ತು ತಣ್ಣನೆಯ ಗಾಳಿಯು ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟವನ್ನು ಸುಧಾರಿಸಿದೆ. ದೆಹಲಿಯ 24 ಗಂಟೆಗಳ ವಾಯು ಗುಣಮಟ್ಟ ಸೂಚ್ಯಂಕವು ಭಾನುವಾರ 45 ರೀಡಿಂಗ್‌ನೊಂದಿಗೆ ಉತ್ತಮ ಸ್ಥಿತಿಯಲ್ಲಿರುವುದು ಭಾನುವಾರ ಕಂಡುಬಂದಿದೆ. 

ರಾಷ್ಟ್ರ ರಾಜಧಾನಿಯಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 5.30ರ ನಡುವೆ 1.3 ಮಿ.ಮೀ ಮಳೆಯಾಗಿದೆ. ತಾಪಮಾನ ಗರಿಷ್ಠ 28.3 ಡಿಗ್ರಿ ಮತ್ತು ಕನಿಷ್ಠ 23.5 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ಪಾದರಸ ಮಟ್ಟವೂ ಐದು ಹಂತಗಳಷ್ಟು ತಗ್ಗಿತ್ತು. ಸೋಮವಾರದಿಂದ ಬುಧವಾರದವರೆಗೆ ಗಾಳಿಯ ಗುಣಮಟ್ಟ ‘ತೃಪ್ತಿದಾಯಕ’ ವಿಭಾಗದಲ್ಲಿಯೇ ಉಳಿಯುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT