ADVERTISEMENT

ರಾಜಸ್ಥಾನದಲ್ಲಿ ಒಂದೇ ಬಾರಿಗೆ 19 ಹೊಸ ಜಿಲ್ಲೆಗಳ ರಚನೆ!

ಒಟ್ಟು ಜಿಲ್ಲೆಗಳ ಸಂಖ್ಯೆ ಈಗ 50ಕ್ಕೆ ಏರಿಕೆ

ಪಿಟಿಐ
Published 18 ಮಾರ್ಚ್ 2023, 16:59 IST
Last Updated 18 ಮಾರ್ಚ್ 2023, 16:59 IST
ಅಶೋಕ್‌ ಗೆಹಲೋತ್‌
ಅಶೋಕ್‌ ಗೆಹಲೋತ್‌    

ಜೈಪುರ: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಹೊಸದಾಗಿ 19 ಜಿಲ್ಲೆಗಳು ಮತ್ತು ಮೂರು ವಿಭಾಗಗಳನ್ನು ರಚಿಸಲಾಗಿದೆ. ಅಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ₹2,000 ಕೋಟಿ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಘೋಷಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಗೆಹಲೋತ್‌ ಅವರು ಇದನ್ನು ಘೋಷಿಸಿದರು. 2023–24ರ ಬಜೆಟ್‌ನಲ್ಲಿ ಈ ನಿರ್ಧಾರಕ್ಕೆ ಧ್ವನಿಮತದ ಅಂಗೀಕಾರವೂ ದೊರೆತಿದೆ.

‘ಹೊಸ ಜಿಲ್ಲೆ ರಚನೆ ಕುರಿತಂತೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿಯು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ಕೆಲವು ಸ್ಥಳಗಳು ಜಿಲ್ಲಾ ಕೇಂದ್ರದಿಂದ 100 ಕಿ.ಮೀ ದೂರದಲ್ಲಿವೆ. ಸಣ್ಣ ಜಿಲ್ಲೆಗಳಲ್ಲಿ ಪರಿಣಾಮಕಾರಿ ಆಡಳಿತ, ಕಾನೂನು ಸುವ್ಯವಸ್ಥೆಯ ನಿಯಂತ್ರಣ ಸಾಧ್ಯ’ ಎಂದು ಅವರು ಹೇಳಿದರು.

ಸದ್ಯ ರಾಜ್ಯದಲ್ಲಿ 33 ಜಿಲ್ಲೆಗಳಿವೆ. ಜೈಪುರವನ್ನು ನಾಲ್ಕು ಜಿಲ್ಲೆಗಳಾಗಿ ಮತ್ತು ಜೋಧಪುರವನ್ನು ಮೂರು ಜಿಲ್ಲೆಗಳಾಗಿ ವಿಭಾಗಿಸಿರುವುದೂ ಸೇರಿ 19 ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಜಿಲ್ಲೆಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಬನ್‌ಸ್ವಾರ, ಪಾಲಿ ಮತ್ತು ಸೀಕರ್ ನೂತನ ವಿಭಾಗಗಳು.

ಈ ಮಧ್ಯೆ, ನೂತನ ಜಿಲ್ಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಬೇಕಾದ ಹಣಕಾಸನ್ನು ಒದಗಿಸುವುದು ಹೇಗೆಂದು ವಿರೋಧ ಪಕ್ಷ ಬಿಜೆಪಿ ಪ್ರಶ್ನಿಸಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.