ADVERTISEMENT

ರಾಜಸ್ಥಾನ: ಗುಜ್ಜರ್ ಬೇಡಿಕೆ ಪರಿಶೀಲನೆಗೆ ಸಂಪುಟ ಸಮಿತಿ

ಪಿಟಿಐ
Published 30 ಜೂನ್ 2025, 13:56 IST
Last Updated 30 ಜೂನ್ 2025, 13:56 IST
   

ಜೈಪುರ: ಗುಜ್ಜರ್‌ ಸೇರಿದಂತೆ ಅತ್ಯಂತ ಹಿಂದುಳಿದ ವರ್ಗಗಳ (ಎಂಬಿಸಿ) ಬೇಡಿಕೆಗಳ ಬಗ್ಗೆ ಪರಿಶೀಲಿಸಿ, ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲು ರಾಜಸ್ಥಾನ ಸರ್ಕಾರವು ಮೂವರು ಸದಸ್ಯರ ಸಂಪುಟ ಸಮಿತಿಯನ್ನು ರಚಿಸಿದೆ.

ರಾಜ್ಯದ ಕಾನೂನು ಸಚಿವ ಜೋಗರಾಮ್‌ ಪಟೇಲ್‌, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅವಿನಾಶ್‌ ಗೆಹಲೋತ್‌, ಗೃಹ ಸಚಿವ ಜವಾಹರ್‌ ಸಿಂಗ್‌ ಬೆಧಾಮ್‌ ಅವರು ಸಮಿತಿ ಸದಸ್ಯರಾಗಿದ್ದಾರೆ.

ಜವಾಹರ್‌ ಸಿಂಗ್‌ ಅವರು ಗುಜ್ಜರ್‌ ಸಮುದಾಯಕ್ಕೆ ಸೇರಿದವರಾಗಿದ್ದು, ಇದಕ್ಕೂ ಮುನ್ನ ನಡೆದ ಚಳವಳಿಗಳಲ್ಲಿ ಭಾಗಿಯಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.