ADVERTISEMENT

ಅತ್ಯಾಚಾರ ಸಂತ್ರಸ್ತೆಗೆ ಗಾಯ ತೋರಿಸು ಎಂದ ಮ್ಯಾಜಿಸ್ಟ್ರೇಟ್‌: ಪ್ರಕರಣ ದಾಖಲು

ಪಿಟಿಐ
Published 3 ಏಪ್ರಿಲ್ 2024, 14:19 IST
Last Updated 3 ಏಪ್ರಿಲ್ 2024, 14:19 IST
<div class="paragraphs"><p>ಸಾಂದರ್ಭಿಕ ಚಿತ್ರ </p></div>

ಸಾಂದರ್ಭಿಕ ಚಿತ್ರ

   

ಜೈಪುರ: ‘ಅತ್ಯಾಚಾರಕ್ಕೊಳಗಾದ ದಲಿತ ಯುವತಿಗೆ ಬಟ್ಟೆ ಕಳಚಿ ಗಾಯ ತೋರಿಸುವಂತೆ ಕೇಳಿದ ಆರೋಪದ ಮೇಲೆ ಕರೌಲಿ ಜಿಲ್ಲೆಯ ಹಿಂಡೌನ್‌ ಕೋರ್ಟ್‌ನ ಮ್ಯಾಜಿಸ್ಟ್ರೇಟ್‌ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.

‘ಸಂತ್ರಸ್ತೆಯು ಈ ಕುರಿತು ಮಾರ್ಚ್‌ 30ರಂದು ದೂರು ನೀಡಿದ್ದಾರೆ’ ಎಂದು ಎಸ್‌ಟಿ– ಎಸ್‌ಸಿ ಘಟಕದ ಡೆಪ್ಯುಟಿ ಎಸ್‌ಪಿ ಮಿನಾ ಮೀನಾ ಅವರು ಹೇಳಿದ್ದಾರೆ.

ADVERTISEMENT

‘ಮ್ಯಾಜಿಸ್ಟ್ರೇಟ್‌ ಹೇಳಿದಂತೆ ಬಟ್ಟೆ ಕಳಚಲು ಸಂತ್ರಸ್ತೆ ನಿರಾಕರಿಸಿದ್ದಾರೆ.‌ ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್ 345 (ಬಲವಂತದಿಂದ ಇರಿಸಿಕೊಳ್ಳುವುದು) ಮತ್ತು ಎಸ್‌ಸಿ–ಎಸ್‌ಟಿ ದೌರ್ಜನ್ಯ ‌ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಸಂತ್ರಸ್ತೆಯು ಮಾರ್ಚ್‌ 19ರಂದು ಅತ್ಯಾಚಾರಕ್ಕೊಳಗಾಗಿದ್ದರು. ಈ ಕುರಿತು ಹಿಂಡೌನ್‌ ಸದರ್‌ ಪೊಲೀಸ್‌ ಠಾಣೆಯಲ್ಲಿ ಮಾರ್ಚ್‌ 27ರಂದು ಎಫ್‌ಐಆರ್‌ ದಾಖಲಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.