ADVERTISEMENT

ರಾಜಸ್ಥಾನ: ಹಳಿ ತಪ್ಪಿದ ಜೋಧಪುರ - ಭೋಪಾಲ್ ಪ್ಯಾಸೆಂಜರ್ ರೈಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2024, 3:17 IST
Last Updated 6 ಜನವರಿ 2024, 3:17 IST
<div class="paragraphs"><p>ಜೋಧಪುರ - ಭೋಪಾಲ್ ಪ್ಯಾಸೆಂಜರ್ ರೈಲು</p></div>

ಜೋಧಪುರ - ಭೋಪಾಲ್ ಪ್ಯಾಸೆಂಜರ್ ರೈಲು

   

ಜೈಪುರ: ಜೋಧಪುರ-ಭೋಪಾಲ್ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಕೋಟಾ ಜಂಕ್ಷನ್ ಬಳಿ ಹಳಿತಪ್ಪಿವೆ.

ಕೋಟಾ ಜಂಕ್ಷನ್ ಬಳಿ ಶುಕ್ರವಾರ ತಡರಾತ್ರಿ ರೈಲಿನ ಬೋಗಿಗಳು ಹಳಿತಪ್ಪಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಕ್ಷಣಕ್ಕೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ದುರಸ್ತಿ ಕಾರ್ಯ ನಡೆಯುತ್ತಿರುವ ವಿಡಿಯೊ ಮತ್ತು ಫೋಟೊಗಳನ್ನು ಸುದ್ದಿಸಂಸ್ಥೆ ‘ಎಎನ್‌ಐ’ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.