ADVERTISEMENT

ಲುಧಿಯಾನದಲ್ಲಿ ರಾಜೀವ್ ಗಾಂಧಿ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು 

ಪಿಟಿಐ
Published 25 ಡಿಸೆಂಬರ್ 2018, 10:57 IST
Last Updated 25 ಡಿಸೆಂಬರ್ 2018, 10:57 IST
ವಿಡಿಯೊ ದೃಶ್ಯದಿಂದ ಸೆರೆಹಿಡಿದ ಚಿತ್ರ
ವಿಡಿಯೊ ದೃಶ್ಯದಿಂದ ಸೆರೆಹಿಡಿದ ಚಿತ್ರ   

ಲುಧಿಯಾನ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪ್ರತಿಮೆಯನ್ನು ಅಕಾಲಿದಳದ ಕಾರ್ಯಕರ್ತರು ವಿರೂಪಗೊಳಿಸಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ದೂರಿದ್ದಾರೆ.
ಮಂಗಳವಾರ ಲುಧಿಯಾನದ ಸಲೇಂ ತಬ್ರಿಯಲ್ಲಿರುವ ರಾಜೀವ್ ಗಾಂಧಿ ಪ್ರತಿಮೆಗೆ ದುಷ್ಕರ್ಮಿಗಳು ಪೇಂಟ್ ಬಳಿದು ವಿರೂಪಗೊಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 1984ರಲ್ಲಿ ಸಿಖ್ ನರಮೇಧಕ್ಕೆ ರಾಜೀವ್ ಗಾಂಧಿ ಕಾರಣ ಎಂಬ ಸಿಟ್ಟಿನಿಂದ ಈ ಕೃತ್ಯ ಎಸಗಲಾಗಿದೆ.

ಈ ಕೃತ್ಯವನ್ನು ಖಂಡಿಸಿ ಟ್ವೀಟ್ ಮಾಡಿದ ಸಿಂಗ್, ಲುಧಿಯಾನದ ಅಕಾಲಿದಳದ ಕಾರ್ಯಕರ್ತರು ರಾಜೀವ್ ಗಾಂಧಿಯವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ.ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಪೊಲೀಸರಿಗೆ ಆದೇಶಿಸಿದ್ದೇನೆ.ಈ ಕೃತ್ಯಕ್ಕಾಗಿ ಸುಖ್‍ಬೀರ್ ಸಿಂಗ್ ಬಾದಲ್ ಅವರ ಕಚೇರಿ ಪಂಜಾಬ್ ಜನತೆಯ ಕ್ಷಮೆಯಾಚಿಸಬೇಕು ಎಂದಿದ್ದಾರೆ.

ದೇಶದಲ್ಲಿರುವ ರಾಜೀವ್ ಗಾಂಧಿ ಪ್ರತಿಮೆಗಳನ್ನು ತೆಗೆದು ಹಾಕಬೇಕು ಮತ್ತು ಅವರಿಗೆ ನೀಡಿದ ಭಾರತ ರತ್ನ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು ಎಂದು ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು ಒತ್ತಾಯಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಲುಧಿಯಾನದಲ್ಲಿ ವಿರೂಪಗೊಳಿಸಿದ ಪ್ರತಿಮೆಯನ್ನುಕಾಂಗ್ರೆಸ್ ನಾಯಕರುಹಾಲಿನಿಂದ ತೊಳೆದು 'ಶುದ್ಧ' ಮಾಡಿದ್ದಾರೆ. ಪ್ರತಿಮೆಗೆ ಪೇಂಟ್ ಬಳಿದು ವಿರೂಪಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಲುಧಿಯಾನದ ಕಾಂಗ್ರೆಸ್ ಅಧ್ಯಕ್ಷ ಗುರ್‌ಪ್ರೀತ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.