ADVERTISEMENT

ಬ್ರಹ್ಮೋಸ್‌ ಕ್ಷಿಪಣಿ: ಹಸಿರು ನಿಶಾನೆ ಇಂದು

ಪಿಟಿಐ
Published 17 ಅಕ್ಟೋಬರ್ 2025, 22:30 IST
Last Updated 17 ಅಕ್ಟೋಬರ್ 2025, 22:30 IST
   

ಲಖನೌ: ಲಖನೌದ ಸರೋಜಿನಿ ನಗರದಲ್ಲಿರುವ ಬ್ರಹ್ಮೋಸ್‌ ಏರೋಸ್ಪೇಸ್‌ ಘಟಕದಲ್ಲಿ ಮೊದಲ ಬ್ಯಾಚ್‌ನ ಬ್ರಹ್ಮೋಸ್‌ ಕ್ಷಿಪಣಿಗಳ ತಯಾರಿಕೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇವುಗಳಿಗೆ ಶನಿವಾರ ಹಸಿರು ನಿಶಾನೆ ತೋರಲಿದ್ದಾರೆ. 

ಇದೇ ಸಂದರ್ಭ ಬೂಸ್ಟರ್‌ ಘಟಕಕ್ಕೂ ಚಾಲನೆ ನೀಡಲಿದ್ದು, ಬೂಸ್ಟರ್ ಡಾಕಿಂಗ್‌ ಪ‍್ರಕ್ರಿಯೆಯ ಪ್ರದರ್ಶನಕ್ಕೂ ಸಾಕ್ಷಿಯಾಗಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ADVERTISEMENT

‘ಉತ್ತರ ಪ‍್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ (ಯುಪಿಡಿಐಸಿ) ಮಹತ್ವದ ಮೈಲಿಗಲ್ಲಾಗಿರುವ ಇದು, ರಕ್ಷಣಾ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸುವ ದೇಶದ ಸಂಕಲ್ಪಕ್ಕೆ ನವಚೈತನ್ಯವನ್ನು ತುಂಬುತ್ತದೆ’ ಎಂದಿದೆ.

ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಗಳ ತಯಾರಕರಾದ ಬ್ರಹ್ಮೋಸ್‌ ಏರೋಸ್ಪೇಸ್‌, ಲಖನೌದಲ್ಲಿನ ತನ್ನ ಘಟಕದಲ್ಲಿ ಮೊದಲ ಬ್ಯಾಚ್‌ನ ಕ್ಷಿಪಣಿಗಳನ್ನು ಯಶಸ್ವಿಯಾಗಿ ಉತ್ಪಾದಿಸಿದೆ. ಈ ಅತ್ಯಾಧುನಿಕ ಘಟಕವು ಸಕಲ ಸೌಲಭ್ಯಗಳನ್ನು ಒಳಗೊಂಡಿದ್ದು, 2025ರ ಮೇ 11ರಂದು ಆರಂಭಗೊಂಡಿತ್ತು.

ಯಶಸ್ವಿ ಪರೀಕ್ಷೆಯ ನಂತರ ಕ್ಷಿಪಣಿಗಳನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ನಿಯೋಜಿಸಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.