ADVERTISEMENT

ಕಾರವಾರ, ಕೊಚ್ಚಿ ನೌಕಾ ನೆಲೆ ಪರಿಶೀಲಿಸಲಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಪಿಟಿಐ
Published 24 ಜೂನ್ 2021, 7:52 IST
Last Updated 24 ಜೂನ್ 2021, 7:52 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ನವದೆಹಲಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ಕಾರವಾರ ಮತ್ತು ಕೊಚ್ಚಿಯಲ್ಲಿರುವ ಭಾರತದ ಪ್ರಧಾನ ನೌಕಾ ನೆಲೆಗಳ ಗುರುವಾರದಿಂದ ಎರಡು ದಿನಗಳ ಕಾಲ ಪರಿಶೀಲಿಸಲಿದ್ದಾರೆ.

ಭಾರತೀಯ ನೌಕಾಪಡೆಯು ಕರ್ನಾಟಕದ ಕಾರವಾರದಲ್ಲಿನ ನಿರ್ಣಾಯಕ ನೌಕಾ ನೆಲೆಯನ್ನು ವಿಸ್ತರಿಸುತ್ತಿದೆ. ಈ ನೆಲೆಯನ್ನು ಪೂರ್ಣವಾಗಿ ಅಭಿವೃದ್ದಿಪಡಿಸಿದ ಬಳಿಕ, ಅದು ಏಷ್ಯಾದ ಅತಿದೊಡ್ಡ ನೌಕಾ ನೆಲೆಗಳಲ್ಲಿ ಒಂದಾಗಲಿದೆ.

ಕೊಚ್ಚಿಯಲ್ಲಿ ಭಾರತದ ಮೊದಲ ಸ್ಥಳೀಯ ವಿಮಾನ ವಾಹಕ ನೌಕೆ (ಐಎಸಿ-ಐ) ವಿಕ್ರಾಂತ್ ನಿರ್ಮಾಣದ ಪ್ರಗತಿಯನ್ನು ರಾಜನಾಥ್‌ ಸಿಂಗ್ ಪರಿಶೀಲಿಸಲಿದ್ದಾರೆ. ಈ ನೌಕೆಯು ಪ್ರಸಕ್ತ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.