ADVERTISEMENT

SIR ಚರ್ಚೆಗೆ ವಿಪಕ್ಷಗಳ ಆಗ್ರಹ, ಗದ್ದಲ: ರಾಜ್ಯಸಭಾ ಕಲಾಪ ಮ.2ಕ್ಕೆ ಮುಂದೂಡಿಕೆ

ಪಿಟಿಐ
Published 29 ಜುಲೈ 2025, 7:27 IST
Last Updated 29 ಜುಲೈ 2025, 7:27 IST
   

ನವದೆಹಲಿ: ಬಿಹಾರದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಮತ್ತು ಇತರೆ ವಿಷಯಗಳ ಕುರಿತು ವಿರೋಧ ಪಕ್ಷಗಳು ನೀಡಿದ್ದ ನಿಲುವಳಿ ಸೂಚನೆ ತಿರಸ್ಕರಿಸಿರುವುದನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ ಮುಂದುವರಿಸಿದ್ದು, ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಲಾಗಿದೆ.

ಬೆಳಗ್ಗೆ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ, ಇತರ ರಾಜ್ಯಗಳಲ್ಲಿ ಬಂಗಾಳಿ ವಲಸೆ ಕಾರ್ಮಿಕರ ವಿರುದ್ಧದ ತಾರತಮ್ಯ ಮತ್ತು ಉಪ ಸಭಾಪತಿ ಜಗದೀಪ್ ಧನಕರ್ ಅವರ ರಾಜೀನಾಮೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗೆ ಒತ್ತಾಯಿಸಿ ನಿಯಮ 267ರ ಅಡಿಯಲ್ಲಿ 24 ನಿಲುವಳಿ ಸೂಚನೆಗಳನ್ನು ಸ್ವೀಕರಿಸಲಾಗಿದೆ ಎಂದು ಉಪ ಸಭಾಪತಿ ಹರಿವಂಶ್ ಹೇಳಿದರು.

ಆದರೂ, ನಿಲುವಳಿ ಸೂಚನೆಗಳು ಸಭಾಪತಿಯ ಹಿಂದಿನ ನಿರ್ದೇಶನಗಳಿಗೆ ಅನುಗುಣವಾಗಿಲ್ಲ ಎಂದು ಹೇಳುವ ಮೂಲಕ ಅವರು ಎಲ್ಲಾ ನಿಲುವಳಿ ಸೂಚನೆಗಳನ್ನು ತಿರಸ್ಕರಿಸಿದರು.

ADVERTISEMENT

ಉಪ ಸಭಾಪತಿಗಳ ನಿರ್ಧಾರದ ವಿರುದ್ಧ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಕೆಲವರು ವೋಟ್ ಕಿ ಚೋರಿ ಬಂದ್ ಕರೊ(ಮತಗಳ್ಳತನ ನಿಲ್ಲಿಸಿ) ಎಂದು ಘೊಷಣೆ ಕೂಗಿದರು.

ಕೂಡಲೇ ಪ್ರತಿಭಟನೆ ನಿಲ್ಲಿಸಿ ಕಲಾಪಕ್ಕೆ ಅನುವು ಮಾಡಿಕೊಡಿ. ಶೂನ್ಯವೇಳೆಯಲ್ಲಿ ನಿಮ್ಮ ಮನವಿ ಆಲಿಸುವುದಾಗಿ ಉಪಸಭಾಪತಿ ಹೇಳಿದರು. ಆದರೂ ಪ್ರತಿಭಟನೆ ಮುಂದುವರಿದ ಕಾರಣ ಸದನದ ಕಲಾಪ 2 ಗಂಟೆಗೆ ಮುಂದೂಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.