ರಾಜ್ಯಸಭೆ
ನವದೆಹಲಿ: ಸಂಸತ್ತಿನ ಉಭಯ ಸದನಗಳನ್ನು ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ನಿಗದಿತ ವೇಳಾಪಟ್ಟಿಯ ಪ್ರಕಾರ, ಶುಕ್ರವಾರದಂದು ಈ ಅಧಿವೇಶನವು ಅಂತ್ಯಗೊಳ್ಳಬೇಕಿತ್ತು.
ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತ ಬಳಿಕ ಅಧಿವೇಶನವನ್ನು ಮುಂದೂಡಲಾಯಿತು. ಈ ಮಸೂದೆಗೆ ಲೋಕಸಭೆಯಲ್ಲಿ ಬುಧವಾರ ಅಂಗೀಕಾರ ದೊರೆತಿತ್ತು.
ಅಲ್ಲದೆ ಚಂದ್ರಯಾನ–3 ಯಶಸ್ಸು, ಸಂಸತ್ತಿನ 75 ವರ್ಷದ ಸಾಧನೆ ಕುರಿತು ಚರ್ಚಿಸಲಾಯಿತು. ಸೆ.18ರಂದು ಅಧಿವೇಶನ ಆರಂಭವಾಗಿತ್ತು. ಸಂಸತ್‌ನ ನೂತನ ಭವನಕ್ಕೆ ಕಲಾಪವು ಸ್ಥಳಾಂತರಗೊಂಡಿದ್ದು ಈ ಅಧಿವೇಶನದ ಮತ್ತೊಂದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.