ನವದೆಹಲಿ: ನೂತನ ಉಪರಾಷ್ಟ್ರಪತಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ ಸಿ.ಪಿ.ರಾಧಾಕೃಷ್ಣನ್ ಅವರು, ರಾಜ್ಯಸಭೆಯ ಸಭಾಪತಿಯಾಗಿ ಪದಗ್ರಹಣ ಮಾಡಿದರು.
ಸಂಸತ್ ಭವನದ ಪ್ರೇರಣಾ ಸ್ಥಳದಲ್ಲಿ ಭಾರತದ ಮೇರು ನಾಯಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಮಾಜಿಕ ಸುಧಾರಕರ ಪ್ರತಿಮೆಗಳಿಗೆ ಗೌರವ ನಮನ ಸಲ್ಲಿಸಿದ ರಾಧಾಕೃಷ್ಣನ್ ಅವರನ್ನು ರಾಜ್ಯಸಭೆಯ ಉಪ ಸಭಾಪತಿ ಹರಿವಂಶ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವರಾದ ಕಿರಣ್ ರಿಜಿಜು ಮತ್ತು ಅರ್ಜುನ್ ರಾಮ್ ಮೇಘ್ವಾಲ್ ಅವರು ಸ್ವಾಗತಿಸಿದರು.
ರಾಜ್ಯಸಭೆ ಸಭಾಪತಿಗಳ ಕಚೇರಿಗೆ ತೆರಳಿದ ರಾಧಾಕೃಷ್ಣನ್ ಅವರು ಮೇಲ್ಮನೆಯ ಚುನಾವಣಾಧಿಕಾರಿ ಕಚೇರಿಯಲ್ಲಿ ಪದಗ್ರಹಣ ದಾಖಲೆಗಳಿಗೆ ಸಹಿ ಮಾಡಿದರು. ಗೃಹ ಇಲಾಖೆಯೂ ಶುಕ್ರವಾರ ಉಪರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಅವರ ಪದಗ್ರಹಣ ಸಂಬಂಧ ಪ್ರತ್ಯೇಕ ಅಧಿಸೂಚನೆಯನ್ನೂ ಹೊರಡಿಸಿತು.
ಪ್ರಮಾಣವಚನ ಸ್ವೀಕರಿಸಿದ ನಂತರ ರಾಧಾಕೃಷ್ಣನ್ ಅವರು ಮಹಾತ್ಮ ಗಾಂಧಿ ಅವರ ಸಮಾಧಿ ಸ್ಥಳ ರಾಜಘಾಟ್, ಮಾಜಿ ಪ್ರಧಾನಿಗಳಾದ ವಾಜಪೇಯಿ ಅವರ ಸದೈವ ಅಟಲ್ ಮತ್ತು ಚರಣ್ ಸಿಂಗ್ ಅವರ ಕಿಸಾನ್ ಘಾಟ್‌ಗಳಿಗೆ ತೆರಳಿ ನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.