ADVERTISEMENT

ರಾಜ್ಯಸಭೆಗೆ ಸಚಿವ ಜೈ ಶಂಕರ್ ಆಯ್ಕೆ

ನೂರಕ್ಕೂ ಹೆಚ್ಚು ಮತ ಪಡೆದ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 19:51 IST
Last Updated 5 ಜುಲೈ 2019, 19:51 IST
ಜೈಶಂಕರ್‌
ಜೈಶಂಕರ್‌   

ಗಾಂಧಿನಗರ (ಪಿಟಿಐ): ಗುಜರಾತ್‌ನಿಂದ ರಾಜ್ಯಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಮತ್ತೊಬ್ಬರು ಬಿಜೆಪಿ ಅಭ್ಯರ್ಥಿ ಹಾಗೂ ಒಬಿಸಿ ಮುಖಂಡ ಜಗ್‌ಲಾಜಿ ಠಾಕೂರ್‌ ಆಯ್ಕೆಯಾದರು.

ಚುನಾವಣಾ ಅಧಿಕಾರಿಗಳು ಅಧಿಕೃತ ಘೋಷಣೆ ಮಾಡುವುದು ಬಾಕಿ ಇದ್ದರೂ, ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿರುವ ಕುರಿತು ಮಾಧ್ಯಮಗಳಿಗೆ ತಿಳಿಸಿದರು.ಕಾಂಗ್ರೆಸ್‌, ಚಂದ್ರಿಕಾ ಚೂಡಾಸಮ ಮತ್ತು ಗೌರವ್‌ ಪಾಂಡ್ಯ ಅವರನ್ನು ಕಣಕ್ಕಿಳಿಸಿತ್ತು. ಅಮಿತ್‌ ಶಾ ಮತ್ತು ಸ್ಮೃತಿಇರಾನಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ 2 ಸ್ಥಾನ ಖಾಲಿಯಾಗಿದ್ದವು.

ಜೈಶಂಕರ್ ಮತ್ತು ಠಾಕೂರ್ ಅವರು100ಕ್ಕೂ ಹೆಚ್ಚು ಮತಗಳನ್ನು ಪಡೆದರು.‘ಚುನಾವಣೆಗೆ ಕಾಂಗ್ರೆಸ್‌ ಅಡ್ಡಿಪಡಿಸಿತ್ತು ಅಲ್ಲದೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ ಅವರ ಪ್ರಯತ್ನ ವಿಫಲವಾಗಿದೆ’ ಎಂದು ರೂಪಾಣಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.