ADVERTISEMENT

ರಾಮರಾಜ್ಯ ಬರುತ್ತಿದೆ, ದೇಶದ ಪ್ರತಿಯೊಬ್ಬರೂ ವಿವಾದಗಳಿಂದ ದೂರವಿರಬೇಕು: ಭಾಗವತ್

ಪಿಟಿಐ
Published 22 ಜನವರಿ 2024, 13:03 IST
Last Updated 22 ಜನವರಿ 2024, 13:03 IST
<div class="paragraphs"><p>ಮೋಹನ್ ಭಾಗವತ್ </p></div>

ಮೋಹನ್ ಭಾಗವತ್

   

–ಪಿಟಿಐ ಚಿತ್ರ

ಅಯೋಧ್ಯೆ: ರಾಮರಾಜ್ಯ ಬರುತ್ತಿದೆ, ದೇಶದ ಪ್ರತಿಯೊಬ್ಬರೂ ವಿವಾದಗಳಿಂದ ದೂರವಿರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ADVERTISEMENT

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ ಅಯೋಧ್ಯೆಯಲ್ಲಿ ಸೇರಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿಯೊಬ್ಬರೇ ತಪಸ್ಸು ಮಾಡಿದ್ದಾರೆ. ಈಗ ನಾವೆಲ್ಲರೂ ತಪಸ್ಸು ಮಾಡಬೇಕಾಗಿದೆ’ ಎಂದರು.

ಅಯೋಧ್ಯೆಯಲ್ಲಿ ನಡೆದ ರಾಮ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಭಾರತದ ಸ್ವಾಭಿಮಾನವು ಮರಳಿದೆ. ಇಂದಿನ ಸಮಾರಂಭವು ಆಧುನಿಕ ಭಾರತದ ಸಂಕೇತವಾಗಿದೆ ಮತ್ತು ಇಡೀ ಜಗತ್ತಿನಲ್ಲಿ ಸಂಭವಿಸಬಹುದಾದ ದುರಂತಗಳಿಗೆ ಮುಂಚೂಣಿಯಲ್ಲಿ ನಿಂತು ಪರಿಹಾರ ಒದಗಿಸುವ ಕೇಂದ್ರವಾಗಲಿದೆ ಎಂದು ಭಾಗವತ್‌ ತಿಳಿಸಿದರು.

ಅಯೋಧ್ಯೆಯ ರಾಮಮಂದಿರದಲ್ಲಿ ಇಂದು (ಸೋಮವಾರ) ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.