ADVERTISEMENT

ದೊಡ್ಡ ಭೂಕಂಪಕ್ಕೂ ಜಗ್ಗದಂತೆ ರಾಮಮಂದಿರ ನಿರ್ಮಾಣ

ಪಿಟಿಐ
Published 28 ಜನವರಿ 2024, 14:10 IST
Last Updated 28 ಜನವರಿ 2024, 14:10 IST
ಅಯೋಧ್ಯೆಯ ರಾಮಮಂದಿರ
ಅಯೋಧ್ಯೆಯ ರಾಮಮಂದಿರ   

ನವದೆಹಲಿ: 2500 ವರ್ಷಗಳಿಗೊಮ್ಮೆ ಸಂಭವಿಸಬಹುದಾದ ಅತಿದೊಡ್ಡ ಪ್ರಮಾಣದ ಭೂಕಂಪವನ್ನೂ ತಡೆದುಕೊಳ್ಳುವ ರೀತಿಯಲ್ಲಿ ಅಯೋಧ್ಯೆಯ ರಾಮಮಂದಿರವನ್ನು ನಿರ್ಮಿಸಲಾಗಿದೆ. 

ರೂರ್ಕಿಯ ಸಿಎಸ್ಐಆರ್–ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಅಯೋಧ್ಯೆಯ ರಾಮಮಂದಿರ ನಿವೇಶನದಲ್ಲಿ ಭೌಗೋಳಿಕ ಗುಣಲಕ್ಷಣ, ಭೌಗೋಳಿಕ ತಾಂತ್ರಿಕ ವಿಶ್ಲೇಷಣೆ, ಅಡಿಪಾಯದ ವಿನ್ಯಾಸ ಮತ್ತು 3ಡಿ ವಿನ್ಯಾಸದ ವಿಶ್ಲೇಷಣೆಗಳು ಹಾಗೂ ವಿನ್ಯಾಸ ಸೇರಿದಂತೆ ಇನ್ನಿತರ ಅಂಶಗಳ ಬಗೆಗೆ ವೈಜ್ಞಾನಿಕವಾಗಿ ಸರಣಿ ಅಧ್ಯಯನ ನಡೆಸಿದೆ.

ಸಿಎಸ್ಐಆರ್–ಸಿಬಿಆರ್‌ಐನ ಹಿರಿಯ ವಿಜ್ಞಾನಿ ದೇಬದತ್ತ ಘೋಷ್, ‘ಗರಿಷ್ಠ 2500 ವರ್ಷಗಳಿಗೊಮ್ಮೆ ಸಂಭವಿಸಬಹುದಾದ ಭೂಕಂಪವನ್ನೂ ತಡೆದುಕೊಳ್ಳಲು ಸುರಕ್ಷಿತವಾಗಿರುವಂತೆ ಕಟ್ಟಡದ ವಿನ್ಯಾಸಕ್ಕಾಗಿ ವೈಜ್ಞಾನಿಕ ಅಧ್ಯಯನ ನಡೆಸಲಾಗಿದೆ’ ಎಂದು ತಿಳಿಸಿದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.