ADVERTISEMENT

‘ರಾಮಮಂದಿರ ಯೋಜನೆಗೆ ₹1,100 ಕೋಟಿ ವೆಚ್ಚ ಸಾಧ್ಯತೆ’

ಪಿಟಿಐ
Published 28 ಡಿಸೆಂಬರ್ 2020, 15:08 IST
Last Updated 28 ಡಿಸೆಂಬರ್ 2020, 15:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಗ್ಪುರ: ಅಯೋಧ್ಯೆಯಲ್ಲಿ ರಾಮಮಂದಿರ ಯೋಜನೆಗೆ ಅಂದಾಜು ₹1,100 ಕೋಟಿ ವೆಚ್ಚವಾಗುವ ಸಾಧ್ಯತೆ ಇದ್ದು, ಯೋಜನೆ ಮೂರುವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸೋಮವಾರ ಹೇಳಿದರು.

ದೇವಸ್ಥಾನದ ಅಡಿಪಾಯ ನಿರ್ಮಾಣಕ್ಕೆ ವಾಸ್ತುಶಿಲ್ಪ ತಜ್ಞರು ಹಾಗೂ ಎಂಜಿನಿಯರ್‌ಗಳು ಯೋಜನೆ ಸಿದ್ಧಪಡಿಸುತ್ತಿದ್ದಾರೆ ಎಂದು ಸ್ವಾಮಿ ಗೋವಿಂದ್‌ ದೇವ್‌ ಗಿರಿಜಿ ಮಹಾರಾಜ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ದೇವಸ್ಥಾನ ನಿರ್ಮಾಣಕ್ಕೆ ₹300 ಕೋಟಿಯಿಂದ ₹400 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ’ ಎಂದರು.

‘ಮಂದಿರ ನಿರ್ಮಾಣದ ಕಾರ್ಯ ಆರಂಭವಾಗಿದ್ದು, ಸದೃಢವಾದ ಅಡಿಪಾಯ ಹಾಕುವುದಕ್ಕೆ ಬಾಂಬೆ, ದೆಹಲಿ, ಮದ್ರಾಸ್‌, ಗುವಾಹಟಿ ಐಐಟಿಯ ತಜ್ಞರು, ಎಲ್‌ಆ್ಯಂಡ್‌ಟಿ ಹಾಗೂ ಟಾಟಾ ಗ್ರೂಪ್‌ನ ವಿಶೇಷ ಎಂಜಿನಿಯರ್‌ಗಳು ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಮಂಗಳವಾರ(ಡಿ.29) ಟ್ರಸ್ಟ್‌ನ ಸಭೆಯಲ್ಲಿ ಅಡಿಪಾಯಕ್ಕೆ ಅವರು ಸೂಚಿಸಿರುವ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು’ ಎಂದರು.

ADVERTISEMENT

‘ಇಲ್ಲಿಯವರೆಗೂ ಆನ್‌ಲೈನ್‌ ಮೂಲಕ ₹100 ಕೋಟಿ ದೇಣಿಗೆ ಬಂದಿದ್ದು, ಜೊತೆಗೆ 4 ಲಕ್ಷ ಹಳ್ಳಿಗಳಿಗೆ ಭೇಟಿ ನೀಡಿ 11 ಕೋಟಿ ಕುಟುಂಬಗಳನ್ನು ಸಂಪರ್ಕಿಸಿ, ಎಲ್ಲರೂ ಈ ಯೋಜನೆಯಲ್ಲಿ ಭಾಗವಹಿಸುವಂತೆ ಕೋರುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.