ADVERTISEMENT

ಗೂಢಚಾರ ಸಂಸ್ಥೆ ‘ರಾ’ ಮುಖ್ಯಸ್ಥರಾಗಿ ಪರಾಗ್ ಜೈನ್ ನೇಮಕ

ಪಿಟಿಐ
Published 28 ಜೂನ್ 2025, 10:04 IST
Last Updated 28 ಜೂನ್ 2025, 10:04 IST
<div class="paragraphs"><p>ಪರಾಗ್‌ ಜೈನ್‌&nbsp;</p></div>

ಪರಾಗ್‌ ಜೈನ್‌ 

   

ನವದೆಹಲಿ: ‘ಆಪರೇಷನ್‌ ಸಿಂಧೂರ’ ಯೋಜನೆಯಲ್ಲಿ ಪ್ರಮುಖ ಪಾತ್ರ ಹಿಸಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಪರಾಗ್‌ ಜೈನ್‌ ಅವರನ್ನು ದೇಶದ ಗುಪ್ತಚರ ಸಂಸ್ಥೆ ‘ರಿಸರ್ಚ್‌ ಆ್ಯಂಡ್‌ ಅನಲಿಸಿಸ್‌ ವಿಂಗ್’ನ (ರಾ) ನೂತನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. 

‘ರಾ’ ಮುಖ್ಯಸ್ಥರಾಗಿರುವ ರವಿ ಸಿನ್ಹಾ ಅವರು ಜೂನ್‌ 30ರಂದು ನಿವೃತ್ತಿ ಹೊಂದಲಿದ್ದಾರೆ. ಸಂಸತ್ತಿನ ನೇಮಕಾತಿ ಸಮಿತಿಯು ಪರಾಗ್‌ ಅವರ ನೇಮಕವನ್ನು ಅನುಮೋದಿಸಿ ಆದೇಶ ಹೊರಡಿಸಿದೆ. 

ADVERTISEMENT

ಪಂಜಾಬ್‌ ಕೇಡರ್‌ನ 1989ರ ಬ್ಯಾಚ್‌ ಅಧಿಕಾರಿಯಾಗಿರುವ ಪರಾಗ್‌ ಅವರು, ವೈಮಾನಿಕ ಕಣ್ಗಾವಲು, ಗಡಿ ಮತ್ತು ಗುಪ್ತಚರ ಮೇಲ್ವಿಚಾರಣೆ ನಡೆಸುವ ‘ವೈಮಾನಿಕ ಸಂಶೋಧನಾ ಕೇಂದ್ರ’ದ ಮುಖ್ಯಸ್ಥರಾಗಿದ್ದು, ಜುಲೈ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 

ಪರಾಗ್‌ ಅವರು ಸಂಸ್ಥೆಯ ಮುಖ್ಯಸ್ಥರಾಗಿ ಎರಡು ವರ್ಷ ಕಾರ್ಯನಿರ್ವಹಿಸಲಿದ್ದಾರೆ. 

‘ಸಿಂಧೂರ’ ಯಶಸ್ಸಿನಲ್ಲಿ ಪರಾಗ್‌

‘ಸಿಂಧೂರ’ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಪ್ರದೇಶಗಳಲ್ಲಿ ಉಗ್ರರ ನೆಲೆಗಳನ್ನು ನಿಖರವಾಗಿ ಗುರಿಯಾಗಿಸಿ ದಾಳಿ ಮಾಡಲು ಸೇನೆಗೆ ಗುಪ್ತಚರ ಮಾಹಿತಿ ನೀಡಿದ್ದ ಪರಾಗ್‌ ಅದರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಜೈನ್‌ ನೇತೃತ್ವದ ತಂಡವು ಸಂಗ್ರಹಿಸಿದ್ದ ನಿಖರವಾದ ಗುಪ್ತಚರದ ಮಾರ್ಗದರ್ಶನದಲ್ಲಿ ಕ್ಷಿಪಣಿ ದಾಳಿ ನಡೆಸಲಾಯಿತು. ಅಂತೆಯೇ ಗುರಿ ತಲುಪಿದ ಕ್ಷಿಪಣಿಗಳಿಂದ ಉಗ್ರರ 9 ಕ್ಯಾಂಪ್‌ಗಳನ್ನು ಧ್ವಂಸ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಕಾರ್ಯಾಚಣೆಯಲ್ಲಿ ಭಾಗಿ

ಮಾನವ ಗುಪ್ತಚರ ಹಾಗೂ ತಾಂತ್ರಿಕ ಗುಪ್ತಚರಗಳೆರಡರಲ್ಲೂ ಪರಿಣಿತಿ ಗಡಿ ದೇಶಗಳೊಂದಿಗಿನ ಸವಾಲುಗಳು ಹಾಗೂ ಖಾಲಿಸ್ತಾನ ಭಯೋತ್ಪಾದಕ ಗುಂಪುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ  ಹೆಚ್ಚಿನ ಅನುಭವ. ಶ್ರೀಲಂಕಾ ಹಾಗೂ ಕೆನಡಾಗಳಲ್ಲಿ ಭಾರತ ನಡೆಸಿದ ಕಾರ್ಯಾಚರಣೆಯಲ್ಲಿ ಭಾಗಿ ಕೆನಡಾದಲ್ಲಿ ಖಾಲಿಸ್ತಾನ ಭಯೋತ್ಪಾದಕ ಗುಂಪುಗಳ ಕಾರ್ಯಾಚರಣೆಯ ಕುರಿತು ಮೇಲ್ವಿಚಾರಣೆ  ಸಂವಿಧಾನದ 370 ನೇ ವಿಧಿ ರದ್ದತಿ ವೇಳೆ ಜಮ್ಮು ಕಾಶ್ಮೀರದಲ್ಲಿ ಜೈನ್‌ ಕಾರ್ಯ ನಿರ್ವಹಣೆ 2019ರಲ್ಲಿ ಜಮ್ಮು ಕಾಶ್ಮೀರದ ಮರುಸಂಘಟನೆಯಲ್ಲಿ ಪ್ರಮುಖ ಪಾತ್ರ  2021ರ ಜ.1ರಂದು ಪಂಜಾಬ್‌ ಡಿಜಿಪಿಯಾಗಿ ಅಧಿಕಾರ ಸ್ವೀಕಾರ  ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚಾಗಿದ್ದ ವೇಳೆ ಅನೇಕ ಮಹತ್ವದ ಕಾರ್ಯಾಚರಣೆ   ಪಂಜಾಬ್‌ನ ವಿವಿಧ ಜಿಲ್ಲೆಗಳ ಎಸ್‌ಎಸ್‌‍ಪಿ ಹಾಗೂ ಡಿಐಜಿ ಆಗಿ ಸೇವೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.