
ಚೆನ್ನೈ: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವುದಕ್ಕೆ ₹500 ಕೋಟಿ ಮಾನನಷ್ಟ ಪರಿಹಾರ ನೀಡುವಂತೆ ಆಡಳಿತಾರೂಢ ಡಿಎಂಕೆ ನ್ಯಾಯಾಂಗ ನೋಟಿಸ್ ಜಾರಿ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ,‘ಕಾನೂನು ಕ್ರಮ ಎದುರಿಸಲು ಸಿದ್ಧನಿದ್ದೇನೆ’ ಎಂದಿದ್ದಾರೆ.
ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಿರುವುದಕ್ಕೆ ಸಮಾನ ಮೊತ್ತ ಪರಿಹಾರ ನೀಡುವಂತೆ ಡಿಎಂಕೆಗೆ ನ್ಯಾಯಾಂಗ ನೋಟಿಸ್ ನೀಡುವುದಾಗಿಯೂ ಅವರು ಸೋಮವಾರ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಣ್ಣಾಮಲೈ, ‘ಡಿಎಂಕೆ ಈ ಹಿಂದೆ ಆಡಳಿತದಲ್ಲಿದ್ದಾಗ ನಡೆದಿರುವ ಮೆಟ್ರೊ ರೈಲು ಯೋಜನೆ ಹಗರಣದ ಕುರಿತು ದಾಖಲೆಗಳಿವೆ. ನಾವು ಅದನ್ನು ಸಿಬಿಐಗೆ ಸಲ್ಲಿಸುತ್ತೇವೆ’ ಎಂದಿದ್ದಾರೆ.
ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ವಿರುದ್ಧ ಹರಿಹಾಯ್ದ ಅಣ್ಣಾಮಲೈ ಅವರು, ‘ನಿಮ್ಮ ಪಕ್ಷದ ಅಧ್ಯಕ್ಷರಿಗೆ ಮತ್ತು ಇತರರಿಗೆ ಸಿಬಿಐ ಸಮನ್ಸ್ ಜಾರಿಯಾಗುವವರೆಗೆ ಸುಮ್ಮನಿರಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.