ADVERTISEMENT

ಜಿ20 ಆತಿಥ್ಯ: ಭಾರತಕ್ಕೆ ಪೂರ್ಣ ಸಹಕಾರ- ಚೀನಾ

ಪಿಟಿಐ
Published 5 ಸೆಪ್ಟೆಂಬರ್ 2023, 14:30 IST
Last Updated 5 ಸೆಪ್ಟೆಂಬರ್ 2023, 14:30 IST
<div class="paragraphs"><p>g-20</p></div>

g-20

   

ರಾಯಿಟರ್ಸ್ ಚಿತ್ರ

ಬೀಜಿಂಗ್‌: ‘ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಆತಿಥ್ಯವನ್ನು ವಹಿಸಲು ಭಾರತಕ್ಕೆ ಅಗತ್ಯವಿರುವ ಎಲ್ಲ ಬೆಂಬಲ ನೀಡಲಾಗುವುದು’ ಎಂದು ಚೀನಾ ಮಂಗಳವಾರ ಹೇಳಿದೆ.

ADVERTISEMENT

ಅಲ್ಲದೆ, ಮಹತ್ವದ ಈ ಜಾಗತಿಕ ಸಮ್ಮೇಳನದ ಯಶಸ್ಸಿಗಾಗಿ ಎಲ್ಲ ಭಾಗಿದಾರರ ಜೊತೆಗೂಡಿ ಕಾರ್ಯನಿರ್ವಹಿಸಲು ಸಿದ್ಧ ಎಂದೂ ತಿಳಿಸಿದೆ. 

ಶೃಂಗಸಭೆಯಲ್ಲಿ ಚೀನಾ ದೇಶವನ್ನು ಪ್ರಧಾನಿ ಲಿ ಕ್ವಿಯಾಂಗ್ ಅವರು ಪ್ರತಿನಿಧಿಸುವರು. ಅಧ್ಯಕ್ಷ ಷಿ ಜಿನ್‌ಪಿಂಗ್ ಭಾಗವಹಿಸುತ್ತಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ಸೋಮವಾರವಷ್ಟೇ ಪ್ರಕಟಿಸಿತ್ತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, ‘ಅಂತರರಾಷ್ಟ್ರೀಯ ಆರ್ಥಿಕ ಸಹಕಾರಕ್ಕೆ ಸಂಬಂಧಿಸಿ ಜಿ20 ಶೃಂಗಸಭೆಯು ಪ್ರಮುಖ ಹಾಗೂ ಮುಂಚೂಣಿ ವೇದಿಕೆಯಾಗಿದೆ ಎಂದರು. ಈ ಶೃಂಗಸಭೆಯು ನವದೆಹಲಿಯಲ್ಲಿ ಸೆಪ್ಟೆಂಬರ್ 9–10ರಂದು ನಡೆಯಲಿದೆ.

ಗಡಿ ವಿವಾದವನ್ನು ಉಲ್ಲೇಖಿಸದೆಯೇ ಅವರು, ‘ಭಾರತ –ಚೀನಾ ಬಾಂಧವ್ಯ ಸ್ಥಿರವಾಗಿದೆ. ಉಭಯ ರಾಷ್ಟ್ರಗಳ ನಡುವೆ ವಿವಿಧ ಹಂತಗಳಲ್ಲಿ ಚರ್ಚೆ, ಸಂವಹನಗಳು ನಡೆದಿವೆ ಎಂದರು. ಲಡಾಖ್‌ನ ಗಾಲ್ವಾನ್‌ ಕಣಿವೆಯಲ್ಲಿ ಜೂನ್‌ 2020ರಲ್ಲಿ ನಡೆದಿದ್ದ ಘರ್ಷಣೆಯ ಬಳಿಕ ಉಭಯದ ದೇಶಗಳ ಬಾಂಧವ್ಯದಲ್ಲಿ ಬಿರುಕು ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.