ADVERTISEMENT

ಕೈದಿಗಳು ಹಸುವಿನ ಪೋಷಣೆ ಮಾಡಿದರೆ ಅಪರಾಧ ಮನಸ್ಥಿತಿ ಬದಲಾಗುತ್ತದೆ: ಮೋಹನ್ ಭಾಗವತ್

ಪಿಟಿಐ
Published 8 ಡಿಸೆಂಬರ್ 2019, 10:09 IST
Last Updated 8 ಡಿಸೆಂಬರ್ 2019, 10:09 IST
ಮೋಹನ್  ಭಾಗವತ್
ಮೋಹನ್ ಭಾಗವತ್   

ಪುಣೆ: ಜೈಲಿನಲ್ಲಿರುವ ಕೈದಿಗಳಿಗೆ ಹಸುಗಳನ್ನು ಸಾಕುವ ಕೆಲಸ ನೀಡಿದಾಗ ಅವರ ಮನಸ್ಥಿತಿಯಲ್ಲಿ ಬದಲಾವಣೆ ಕಂಡು ಬಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಶನಿವಾರ ಗೋ ವಿಗ್ಯಾನ್ ಸಂಶೋಧನ್ ಸಂಸ್ಥಾ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಭಾಗವತ್ ಹಸುಗಳಈ ರೀತಿಯ ವೈಶಿಷ್ಟ್ಯಗಳನ್ನು ದಾಖಲಿಸಬೇಕಿದೆ ಎಂದಿದ್ದಾರೆ.

ಗೋವು ಜಗತ್ತಿನ ತಾಯಿ. ಇದು ಮಣ್ಣನ್ನು, ಪ್ರಾಣಿ, ಪಕ್ಷಿ ಮತ್ತು ಮನುಷ್ಯರನ್ನು ಪೋಷಿಸುತ್ತದೆ. ಮನುಷ್ಯರನ್ನು ಕಾಯಿಲೆಗಳಿಂದ ರಕ್ಷಿಸಿ ಮನುಷ್ಯನ ಹೃದಯವನ್ನು ಹೂವಿನಂತೆ ಮೃದುಮಾಡುತ್ತದೆ .

ADVERTISEMENT

ಜೈಲುಗಳಲ್ಲಿ ಗೋಶಾಲೆಗಳನ್ನು ನಿರ್ಮಿಸಿ ಕೈದಿಗಳಿಗೆ ಗೋವುಗಳನ್ನು ಆರೈಕೆ ಮಾಡುವ ಹೊಣೆ ನೀಡಿದಾಗ ಕೈದಿಗಳ ಅಪರಾಧ ಮನಸ್ಥಿತಿ ಕಡಿಮೆಯಾಗಿದೆ. ಜೈಲಿನ ಅಧಿಕಾರಿಗಳು ತಮ್ಮ ಅನುಭವಗಳನ್ನು ನನ್ನ ಜತೆ ಹಂಚಿಕೊಂಡಿದ್ದನ್ನು ನಾನಿಲ್ಲಿ ಹೇಳುತ್ತಿದ್ದೇನೆ ಎಂದಿದ್ದಾರೆ.

ಗೋವುಗಳ ವೈಶಿಷ್ಟ್ಯವನ್ನು ಜಗತ್ತಿಗೆ ಸಾಬೀತು ಪಡಿಸಬೇಕಾದರೆ ನೀವು ಅದನ್ನು ದಾಖಲಿಸಬೇಕು. ಕೈದಿಗಳ ಮನಸ್ಥಿತಿಮೇಲೆ ಪ್ರಯೋಗ ನಡೆಸಿ, ಹಸುಗಳನ್ನು ಆರೈಕೆಮಾಡಿದ ಮೇಲೆ ಅವರ ಮನಸ್ಥಿತಿಯಲ್ಲಾದ ಪರಿಣಾಮವನ್ನು ದಾಖಲಿಸಬೇಕು. ವಿವಿಧ ಪ್ರದೇಶಗಳಲ್ಲಿ ಈ ರೀತಿಯ ಪ್ರಯೋಗಮಾಡಬೇಕು.

ಈ ಸಂಸ್ಥೆ ಬೀಡಾಡಿ ದನಗಳನ್ನ ತಂದು ಸಾಕುತ್ತಿದ್ದು ಇಲ್ಲಿ ಜಾಗದ ಕೊರತೆ ಇದೆ. ನಮ್ಮ ಜನರು ಒಬ್ಬೊಬ್ಬರು ಒಂದೊಂದು ದನವನ್ನು ಸಾಕಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಸಮಾಜದ ಎಲ್ಲ ವಿಭಾಗದ ಜನರು ಒಗ್ಗೂಡಿ ಹಸುಗಳ ಆರೈಕೆ ಹೊಣೆ ಹೊತ್ತುಕೊಳ್ಳಬೇಕು. ಯಾರೊಬ್ಬರೂ ಕಸಾಯಿಖಾನೆಗೆ ಹಸುಗಳನ್ನು ಕಳುಹಿಸಬಾರದು. ಇದೀಗ ಹಿಂದೂಗಳೇ ಹೆಚ್ಚಾಗಿ ಹಸುಗಳನ್ನು ಕಸಾಯಿಖಾನೆಗೆ ದೂಡುತ್ತಿದ್ದಾರೆ ಎಂದು ಭಾಗವತ್ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.