ADVERTISEMENT

ಆಯುಷ್ಮಾನ್ ಭಾರತ: ಒಂದೇ ದಿನ 8 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಹೆಸರು ಪರಿಶೀಲನೆ

ದೇಶದಾದ್ಯಂತ ‘ಆಪ್‌ಕೆ ದ್ವಾರಾ ಆಯುಷ್ಮಾನ್‘ ಆಂದೋಲನ

ಪಿಟಿಐ
Published 16 ಮಾರ್ಚ್ 2021, 9:43 IST
Last Updated 16 ಮಾರ್ಚ್ 2021, 9:43 IST
ಆಯುಷ್ಮಾನ್ ಭಾರತ ಆಂದೋಲನ (ಸಾಂದರ್ಭಿಕ ಚಿತ್ರ)
ಆಯುಷ್ಮಾನ್ ಭಾರತ ಆಂದೋಲನ (ಸಾಂದರ್ಭಿಕ ಚಿತ್ರ)   

ನವದೆಹಲಿ: ಆಯುಷ್ಮಾನ್‌ ಭಾರತ್‌ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ‘ಆಪ್‌ಕೆ ದ್ವಾರಾ ಆಯುಷ್‌ಮಾನ್‘ ಆಂದೋಲನದ ಭಾಗವಾಗಿ ಮಾ.14ರಂದು ಒಂದೇ ದಿನ 8,35,089 ಫಲಾನುಭವಿಗಳ ಹೆಸರುಗಳನ್ನು ಪರಿಶೀಲಿಸಿರುವುದಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮಂಗಳವಾರ ತಿಳಿಸಿದೆ.

ಆಯುಷ್ಮಾನ್‌ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದಕ್ಕಾಗಿ ಫೆಬ್ರುವರಿ 1 ರಿಂದ ‘ಆಪ್‌ಕೆ ದ್ವಾರಾ ಆಯುಷ್‌ಮಾನ್‘ ಆಂದೋಲನ ಆರಂಭವಾಗಿದೆ.

ದೇಶದ ಮೂಲೆ ಮೂಲೆಗಳಲ್ಲಿರುವ ಯೋಜನೆಯ ಫಲಾನುಭವಿಗಳನ್ನು ಗುರುತಿಸುವ ಜತೆಗೆ, ಈ ಯೋಜನೆ ಬಗ್ಗೆ ಹೆಚ್ಚು ಜನರಿಗೆ ಅರಿವು ಮೂಡಿಸುವುದು ಈ ಆಂದೋನದ ಮತ್ತೊಂದು ಉದ್ದೇಶವಾಗಿದೆ. ಇಂಥ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ್ದಾಗಿದೆ ಎಂದು ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಆಯುಷ್ಮಾನ್ ಕಾರ್ಡ್‌ಗಳನ್ನು ಹೊಂದಿರುವ ಫಲಾನುಭವಿಗಳ ಪ್ರತಿ ಕುಟುಂಬಕ್ಕೆ ₹ 5 ಲಕ್ಷದ ವರೆಗೆ ಉಚಿತ ಆರೋಗ್ಯ ಸೇವೆ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.