ADVERTISEMENT

ಚಾರ್ ಧಾಮ್ ಯಾತ್ರೆ: ಈ ವರ್ಷ ದಾಖಲೆ ಸಂಖ್ಯೆಯ ಭಕ್ತರ ಭೇಟಿ

ಪಿಟಿಐ
Published 10 ಜೂನ್ 2022, 3:08 IST
Last Updated 10 ಜೂನ್ 2022, 3:08 IST
ಕೇದಾರನಾಥ ದೇಗುಲ – ಪಿಟಿಐ ಚಿತ್ರ
ಕೇದಾರನಾಥ ದೇಗುಲ – ಪಿಟಿಐ ಚಿತ್ರ   

ಡೆಹ್ರಾಡೂನ್: ಈ ವರ್ಷ ಚಾರ್‌ ಧಾಮ್ ಯಾತ್ರೆಗೆ ದಾಖಲೆ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ. ಯಾತ್ರೆ ಆರಂಭವಾಗಿ ಒಂದು ತಿಂಗಳಾಗುವ ಮೊದಲೇ 18 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಸಂಜೆ 4 ಗಂಟೆಯವರೆಗಿನ ಲೆಕ್ಕಾಚಾರದ ಪ್ರಕಾರ, ಬದರಿನಾಥಕ್ಕೆ 6,18,312 ಭಕ್ತರು ಬಂದಿದ್ದಾರೆ. ಕೇದಾರನಾಥಕ್ಕೆ 5,98,590 ಯಾತ್ರಿಕರು ಆಗಮಿಸಿದ್ದಾರೆ.

ಗಂಗೋತ್ರಿಗೆ 3,39,090 ಭಕ್ತರು ಭೇಟಿ ನೀಡಿದ್ದರೆ, ಯಮುನೋತ್ರಿಗೆ 2,50,398 ಭಕ್ತರು ಆಗಮಿಸಿದ್ದಾರೆ ಎಂದು ಬದರಿನಾಥ–ಕೇದಾರನಾಥ ದೇಗುಲ ಸಮಿತಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌಡ ತಿಳಿಸಿದ್ದಾರೆ.

ADVERTISEMENT

ಈವರೆಗೆ ಒಟ್ಟು 18,01,209 ಭಕ್ತರು ಚಾರ್‌ ಧಾಮ್ ಯಾತ್ರೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.