
ನವದೆಹಲಿ: ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡ ಸ್ಥಳದಿಂದ ವಶಪಡಿಸಿಕೊಂಡ ಮೂರು ಕಾರ್ಟ್ರಿಡ್ಜ್‌ಗಳನ್ನು ಭದ್ರತಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಮೂರು ಕಾರ್ಟ್ರಿಡ್ಜ್‌ಗಳ ಪೈಕಿ ಎರಡು ಜೀವಂತ ಗುಂಡುಗಳಾಗಿದ್ದು, ಒಂದು ಖಾಲಿ ಶೆಲ್ ಆಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, 9 ಎಂಎಂ ಗುಂಡುಗಳನ್ನು ಸಾಮಾನ್ಯವಾಗಿ ಸಶಸ್ತ್ರ ಪಡೆಗಳು ಅಥವಾ ವಿಶೇಷ ಅನುಮತಿ ಪಡೆದಿರುವ ವ್ಯಕ್ತಿಗಳಿಗೆ ನೀಡಲಾಗುತ್ತದೆ.
ಈ ಕಾರ್ಟ್ರಿಡ್ಜ್‌ಗಳು ಘಟನಾ ಸ್ಥಳದಲ್ಲಿ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿಗೆ ಸೇರಿದವಲ್ಲ. ಅವರ ಬಳಿ ಇದ್ದ ಗುಂಡುಗಳು ಕಾಣೆಯಾಗಿಲ್ಲ. ಹೀಗಾಗಿ, ಈ ಗುಂಡುಗಳು ಶಂಕಿತನ ಬಳಿ ಇದ್ದವೇ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಉಮರ್ ನಬಿ ಫರಿದಾಬಾದ್‌ನಿಂದ ಹೊರಟು ಹರಿಯಾಣದ ನೂಹ್‌ಗೆ ಭೇಟಿ ನೀಡಿ ದೆಹಲಿಯಲ್ಲಿ ಚಹಾ ಕುಡಿದ ಸಮಯದಿಂದ ಹಿಡಿದು ಸ್ಫೋಟಕ್ಕೆ ಕಾರಣವಾದ ಸಂಪೂರ್ಣ ಘಟನೆಯನ್ನು ಮರುಸೃಷ್ಟಿಸಲು ಭದ್ರತಾ ಸಂಸ್ಥೆಗಳು ಸಿದ್ಧತೆ ನಡೆಸುತ್ತಿವೆ ಎಂದು ಹೇಳಿದ್ದಾರೆ.
ನ.10ರಂದು ಕೆಂಪು ಕೋಟೆ ಬಳಿ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿ 13 ಮಂದಿ ಮೃತಪಟ್ಟು, 24ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.