ADVERTISEMENT

104 ರೈಲು ನಿಲ್ದಾಣ ಮರು ಅಭಿವೃದ್ಧಿ ಪೂರ್ಣ: ಸಚಿವ ಅಶ್ವಿನಿ ವೈಷ್ಣವ್‌

ಪಿಟಿಐ
Published 12 ಏಪ್ರಿಲ್ 2025, 13:22 IST
Last Updated 12 ಏಪ್ರಿಲ್ 2025, 13:22 IST
ಅಶ್ವಿನಿ ವೈಷ್ಣವ್‌ –ಪಿಟಿಐ ಚಿತ್ರ
ಅಶ್ವಿನಿ ವೈಷ್ಣವ್‌ –ಪಿಟಿಐ ಚಿತ್ರ   

ಮುಂಬೈ: ಅಮೃತ್‌ ಭಾರತ್‌ ಯೋಜನೆಯಡಿ ದೇಶದಾದ್ಯಂತ 1,300 ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಈ ಪೈಕಿ 104 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ನ ಮರು ಅಭಿವೃದ್ಧಿಗೆ ₹1,800 ಕೋಟಿ ನಿಗದಿಪಡಿಸಲಾಗಿದೆ. ಇಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶ್ವದರ್ಜೆ ಗುಣಮಟ್ಟದ ರೈಲ್ವೆ ಸೌಕರ್ಯ ಒದಗಿಸಲು ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನಿಲ್ದಾಣಗಳನ್ನು ಅಧುನೀಕರಣಗೊಳಿಸಿ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಕಲ್ಪಿಸುವುದು ಈ ಯೋಜನೆಯ ಗುರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು, 2023ರಲ್ಲಿ ಇದಕ್ಕೆ ಚಾಲನೆ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.