ADVERTISEMENT

ಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ಸಿಗಲಿದೆ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌

ಪಿಟಿಐ
Published 27 ಜನವರಿ 2022, 19:57 IST
Last Updated 27 ಜನವರಿ 2022, 19:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಭಾರತದ ಔಷಧ ಮಹಾನಿಯಂತ್ರಕರ (ಡಿಸಿಜಿಐ) ಕೆಲ ಷರತ್ತಿಗೊಳಪಟ್ಟು ಗುರುವಾರ ಅನುಮೋದನೆ ನೀಡಿದ್ದಾರೆ.

ವಯಸ್ಕರಿಗೆ ಬಳಸಲು ಇದು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕ್ಲಿನಿಕಲ್‌ ಪ್ರಯೋಗದ ಅಂಕಿ ಅಂಶ ಒದಗಿಸಬೇಕು, ನಿಗದಿತ ಕಾರ್ಯಸೂಚಿಯಂತೆ ಪೂರೈಸಬೇಕು, ಲಸಿಕೆ ನಂತರದ ಪ್ರತಿಕೂಲ ಪರಿಣಾಮ ಸಾಧ್ಯತೆಗಳ ಮೇಲ್ವಿಚಾರಣೆ ನಡೆಸಬೇಕು ಎಂದು ಲಸಿಕೆ ಉತ್ಪಾದಕ ಸಂಸ್ಥೆಗಳಿಗೆ ಷರತ್ತು ವಿಧಿಸಲಾಗಿದೆ. ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ವಿಷಯ ಪರಿಣತರ ಸಮಿತಿಯು ಜನವರಿ 19ರಂದು ಮುಕ್ತ ಮಾರುಟಕ್ಟೆಗೆ ಅನುಮತಿ ನೀಡಲು ಶಿಫಾರಸು ಮಾಡಿತ್ತು. ದೇಶದಲ್ಲಿ ಸೀರಂ ಇನ್‌ಸ್ಟಿಟ್ಯೂಟ್‌ ಸಂಸ್ಥೆಯು ಕೋವಿಶೀಲ್ಡ್‌ ಮತ್ತು ಭಾರತ್ ಬಯೊಟೆಕ್‌ ಸಂಸ್ಥೆಯು ಕೋವ್ಯಾಕ್ಸಿನ್‌ ಲಸಿಕೆಯನ್ನು ಉತ್ಪಾದಿಸುತ್ತಿದೆ.

ಅನುಮೋದನೆಗೆ ಪೂರ್ವಭಾವಿ ಯಾಗಿ ಡಿಸಿಜಿಐ ಕೆಲ ಮಾಹಿತಿ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಸ್‌ಐಐನ ನಿರ್ದೇಶಕ (ನಿಯಂತ್ರಣ ವ್ಯವಹಾರ) ಪ್ರಕಾಶ್‌ ಕುಮಾರ್ ಸಿಂಗ್ ಅವರು, ‘ಕೋವಿಶೀಲ್ಡ್‌ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗಿದೆ. ಸೋಂಕು ನಿಯಂತ್ರಣದಲ್ಲಿದೆ ಎಂಬುದೇ ಇದರ ಸುರಕ್ಷತೆ, ಸಾಮರ್ಥ್ಯಕ್ಕೆ ನಿದರ್ಶನ’ ಎಂದು ತಿಳಿಸಿದ್ದರು.

ADVERTISEMENT

ಡಿಸಿಜಿಐಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಭಾರತ್ ಬಯೊಟೆಕ್‌ನ ನಿರ್ದೇಶಕ ವಿ.ಕೃಷ್ಣ ಮೋಹನ್‌ ಅವರು, ಲಸಿಕೆ ಉತ್ಪಾದನೆಗೆ ಬಳಸುವ ರಾಸಾಯನಿಕ ಸೂತ್ರ, ಉತ್ಪಾದನೆ, ನಿಯಂತ್ರಣ, ಕ್ಲಿನಿಕಲ್‌ ಮಾಹಿತಿಯನ್ನು ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.