ADVERTISEMENT

ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 16:01 IST
Last Updated 7 ಏಪ್ರಿಲ್ 2020, 16:01 IST
ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ
ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ    

ಶ್ರೀನಗರ: ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಕಳೆದ ಎಂಟು ತಿಂಗಳಿಂದ ಗೃಹಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರನ್ನು ಮಂಗಳವಾರ ಅವರ ಅಧಿಕೃತ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.

ಇಲ್ಲಿನ ಸರ್ಕಾರದ ಅತಿಥಿ ಗೃಹದಲ್ಲಿ ಇರಿಸಲಾಗಿದ್ದ ಮೆಹಬೂಬ ಮುಫ್ತಿ ಅವರನ್ನು ಗುಪ್ಕಾರ್‌ ರಸ್ತೆಯಲ್ಲಿರುವ ‘ಫೇರ್‌ವಿವ್‌’ ಗೆ ಸ್ಥಳಾಂತರಿಸಲಾಗಿದ್ದು, ಮುಫ್ತಿ ಅವರ ಗೃಹಬಂಧನವನ್ನು ಮುಂದುವರೆಸಲಾಗಿದೆ.

ಮೆಹಬೂಬ ಮುಫ್ತಿ ಅವರ ಅಧಿಕೃತ ನಿವಾಸವನ್ನೇ ಉಪ ಕಾರಾಗೃಹವನ್ನಾಗಿ ಮಾರ್ಪಡು ಮಾಡಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲೀನ್‌ ಕಬ್ರಾ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಜಮ್ಮುಮತ್ತು ಕಾಶ್ಮೀರದ ವಿವಿಧ ಜೈಲುಗಳಲ್ಲಿ ಇಡಲಾಗಿದ್ದ 18 ಮಂದಿಯನ್ನು ಮಂಗಳವಾರ ಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.