ADVERTISEMENT

ರೆಮ್‌ಡಿಸಿವಿರ್‌ ಮಾರಾಟ | ಗುಜರಾತ್‌: ಔಷಧ ಕಂಪನಿ ಅಧಿಕಾರಿ ಸೇರಿ ಇಬ್ಬರ ಬಂಧನ

ಕಾಳಸಂತೆಯಲ್ಲಿ ರೆಮ್‌ಡಿಸಿವಿರ್‌ ಮಾರಾಟ ಆರೋಪ

ಪಿಟಿಐ
Published 18 ಏಪ್ರಿಲ್ 2021, 15:11 IST
Last Updated 18 ಏಪ್ರಿಲ್ 2021, 15:11 IST
Remdesivir
Remdesivir   

ವಲ್ಸಾಡ್‌, ಗುಜರಾತ್‌: ಕೋವಿಡ್‌–19 ಚಿಕಿತ್ಸೆಯಲ್ಲಿ ಪ್ರಮುಖವಾಗಿ ಬಳಕೆಯಾಗುವ ರೆಮ್‌ಡಿಸಿವಿರ್‌ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬ್ರಕ್‌ ಫಾರ್ಮಾ ಕಂಪನಿಯ ಹಿರಿಯ ಅಧಿಕಾರಿ ಹಾಗೂ ಆತನಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ದಮನ್‌ ಮೂಲದ ಈ ಕಂಪನಿಯ ತಾಂತ್ರಿಕ ನಿರ್ದೇಶಕ ಮನೀಷ್‌ ಸಿಂಗ್‌ ಹಾಗೂ ಸಹಾಯಕ ವರುಣ್‌ ಕುಂದ್ರಾ ಬಂಧಿತರು. ವರುಣ್‌ ಕುಂದ್ರಾ ದಮನ್‌ನಲ್ಲಿ ಪೀಠೋಪಕರಣ ಮಾರಾಟ ಮಳಿಗೆ ನಡೆಸುತ್ತಿದ್ದಾರೆ ಎಂದು ಎಸ್ಪಿ ರಾಜದೀಪ್‌ ಝಾಲಾ ತಿಳಿಸಿದ್ದಾರೆ.

‘ಇಬ್ಬರನ್ನೂ ವಾಪಿ ಪಟ್ಟಣದಲ್ಲಿ ಬಂಧಿಸಲಾಗಿದ್ದು, ಅವರಿಂದ ರೆಮ್‌ಡಿಸಿವಿರ್‌ನ 18 ವಯಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.