ADVERTISEMENT

ರಾಹುಲ್, ಪ್ರಿಯಾಂಕಾ ಹೆರಿಗೆ ಮಾಡಿಸಿದ್ದ ಪ್ರಸೂತಿ ತಜ್ಞೆ ಡಾ.ಎಸ್.ಕೆ.ಭಂಡಾರಿ ನಿಧನ

ದೆಹಲಿಯ ಖ್ಯಾತ ಪ್ರಸೂತಿ ತಜ್ಞೆ

ಪಿಟಿಐ
Published 14 ಮೇ 2021, 6:00 IST
Last Updated 14 ಮೇ 2021, 6:00 IST
.
.   

ನವದೆಹಲಿ: ಇಲ್ಲಿನ ಸರ್‌ ಗಂಗಾರಾಮ್‌ ಆಸ್ಪತ್ರೆಯಲ್ಲಿ 58 ವರ್ಷಗಳ ಕಾಲ ಪ್ರಸೂತಿ ತಜ್ಞರಾಗಿ ಸೇವೆ ಸಲ್ಲಿಸಿದ್ದ ಡಾ.ಎಸ್‌.ಕೆ.ಭಂಡಾರಿ (86) ಅವರು ಗುರುವಾರ ಕೋವಿಡ್‌ನಿಂದ ನಿಧನರಾದರು.

ಡಾ.ಎಸ್.ಕೆ.ಭಂಡಾರಿ ಅವರು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಹೆರಿಗೆ ಮಾಡಿಸಿದ್ದಷ್ಟೇ ಅಲ್ಲದೆ, ಪ್ರಿಯಾಂಕಾ ಗಾಂಧಿ ಅವರ ಇಬ್ಬರು ಮಕ್ಕಳನ್ನೂ ಹೆರಿಗೆ ಮಾಡಿಸಿದವರು.

ಅವರ ಪತಿ, ನಿವೃತ್ತ ಐಎಎಸ್‌ ಅಧಿಕಾರಿ ಜೆ.ಎಸ್‌. ಭಂಟಾರಿ ಅವರೂ ಕೋವಿಡ್‌ನಿಂದ ಬಳಲುತ್ತಿದ್ದು, ಐಸಿಯುನಲ್ಲಿದ್ದಾರೆ. ಅವರಿಗೆ ಪುತ್ರಿ ಇದ್ದಾರೆ. ದಂಪತಿ ಎರಡನೇ ಡೋಸ್ ಕೋವಿಡ್‌ ಲಸಿಕೆಯನ್ನೂ ಪಡೆದಿದ್ದರು.

ADVERTISEMENT

ಕಳೆದ ವರ್ಷದ ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲೂ ಅವರು ಆಸ್ಪತ್ರೆಗೆ ಬಂದು ಸೇವೆ ಸಲ್ಲಿಸಿದ್ದರು. ಆದರೆ ಬಳಿಕ ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ಬರುವುದನ್ನು ನಿಲ್ಲಿಸಿದ್ದರು. ಆದರೆ ತಮ್ಮ ಮನೆಯಲ್ಲಿ ಸಲಹೆ ನೀಡುವುದನ್ನು ಮುಂದುವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.