ಇಂದೋರ್: ಕೋವಿಡ್–19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಉರ್ದು ಕವಿ ರಾಹತ್ ಇಂದೋರಿ(70), ಮಂಗಳವಾರ ಹೃದಯಾಘಾತದಿಂದ ಅರವಿಂದೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಅವರ ಪುತ್ರ ಸಟ್ಲಾಜ್ ಇಂದೋರಿ ತಿಳಿಸಿದರು.
ಸೋಂಕು ದೃಢಪಟ್ಟ ಕಾರಣದಿಂದಾಗಿಮಂಗಳವಾರ ಬೆಳಗ್ಗೆಯಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟ್ವೀಟ್ ಮೂಲಕ ಅವರೇ ಈ ಮಾಹಿತಿಯನ್ನು ತಿಳಿಸಿದ್ದರು. ‘ಕೊರೊನಾ ಸೋಂಕಿನ ಪ್ರಾರಂಭಿಕ ಲಕ್ಷಣಗಳು ಕಾಣಿಸಿಕೊಂಡ ಕಾರಣದಿಂದ ಸೋಮವಾರ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದೆ. ಸೋಂಕು ಇರುವುದು ದೃಢಪಟ್ಟಿದ್ದು, ಶೀಘ್ರದಲ್ಲೇ ಗುಣಮುಖನಾಗಿ ಬರುವಂತೆ ಪ್ರಾರ್ಥಿಸುತ್ತೇನೆ’ ಎಂದು ತಮ್ಮ ಕೊನೆಯ ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದರು.
ಇವರು ಬರೆದ1997ರಲ್ಲಿ ತೆರೆಕಂಡ ಇಷ್ಕ್ ಸಿನಿಮಾದ ‘ನೀಂದ್ ಚುರಾಯಿ ಮೇರಿ’ ಹಾಗೂ 2003ರಲ್ಲಿ ತೆರೆಕಂಡ ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾದ ‘ಎಂ ಬೊಲೆ ತೊ’ ಹಾಡು ಇಂದಿಗೂ ಜನಪ್ರೀಯವಾಗಿದೆ. ವರ್ಷದ ಆರಂಭದಲ್ಲಿ ಇವರು ಬರೆದ ‘ಬುಲಾತಿ ಹೆ ಮಗರ್ ಜಾನೆ ಕಾ ನಹಿ’ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.