ADVERTISEMENT

ಗಣರಾಜ್ಯೋತ್ಸವ: 75 ವಿಮಾನಗಳ ಮೂಲಕ ದೊಡ್ಡ ಮಟ್ಟದ ವೈಮಾನಿಕ ಪ್ರದರ್ಶನ

ಪಿಟಿಐ
Published 17 ಜನವರಿ 2022, 14:14 IST
Last Updated 17 ಜನವರಿ 2022, 14:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಗಣರಾಜ್ಯೋತ್ಸವ ದಿನದಂದು ರಾಜಪಥದಲ್ಲಿ ನಡೆಯುವ ಪಥಸಂಚಲನದಲ್ಲಿ ಈ ಬಾರಿ 75 ವಿಮಾನಗಳ ಅತ್ಯುತ್ತಮ ಮತ್ತು ಅತಿದೊಡ್ಡ ವೈಮಾನಿಕ ಪ್ರದರ್ಶನ ಇರಲಿದೆ ಎಂದು ಭಾರತೀಯ ವಾಯುದಳದ (ಐಎಎಫ್‌) ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

ಈ ವೇಳೆ 7 ಜಾಗ್ವಾರ್‌ ಯುದ್ಧ ವಿಮಾನಗಳು ಹಾರಾಟ ನಡೆಸುವುದರೊಂದಿಗೆ ವೈಮಾನಿಕ ಪ್ರದರ್ಶನವು ಮುಕ್ತಾಯಗೊಳ್ಳಲಿದೆ.

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭವನ್ನು ಸ್ಮರಣೀಯವಾಗಿಸಲು ಈ ವರ್ಷದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ವಾಯುಪಡೆ, ಸೇನೆ ಮತ್ತು ನೌಕಾಪಡೆಯ 75 ವಿಮಾನಗಳು ಹಾರಾಟ ನಡೆಸಲಿವೆ. ಇದು ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಲಿದೆ’ ಎಂದು ಐಎಎಫ್‌ ಪಿಆರ್‌ಒ ಘಟಕದ ಕಮಾಂಡರ್‌ ಇಂದ್ರಾಣಿಲ್‌ ನಂದಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.