ADVERTISEMENT

ಈ ಬಾರಿಯ ಗಣರಾಜ್ಯೋತ್ಸವದಲ್ಲಿ CRPF ಪುರುಷರ ತುಕಡಿಗೆ ಮಹಿಳಾ ಅಧಿಕಾರಿಯೇ ನಾಯಕಿ

ಪಿಟಿಐ
Published 22 ಜನವರಿ 2026, 6:43 IST
Last Updated 22 ಜನವರಿ 2026, 6:43 IST
<div class="paragraphs"><p>ಸಿಮ್ರನ್‌ ಬಾಲಾ</p></div>

ಸಿಮ್ರನ್‌ ಬಾಲಾ

   

ನವದೆಹಲಿ: ದೇಶದ ಭದ್ರತಾ ವ್ಯವಸ್ಥೆಯಲ್ಲಿ ಹೆಚ್ಚಿನ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿಯೂ ಮಹಿಳಾ ಅಧಿಕಾರಿಗಳು ಮಹತ್ವದ ಪಾತ್ರ ವಹಿಸಿದ್ದರು.

ಈ ಬಾರಿಯ ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್‌ನಲ್ಲಿ ಕೇಂದ್ರೀಯ ಮೀಸಲು ಪಡೆಯ (ಸಿಆರ್‌ಪಿಎಫ್‌) ಅಸಿಸ್ಟಂಟ್‌ ಕಮಾಂಡಂಟ್ ಆಗಿರುವ 26 ವರ್ಷದ ಸಿಮ್ರನ್‌ ಬಾಲಾ ಅವರು ಪುರುಷ ತುಕಡಿಯನ್ನು ಮುನ್ನಡೆಸಲಿದ್ದಾರೆ.

ADVERTISEMENT

ಗಣರಾಜ್ಯೋತ್ಸವದ ವಿವಿಧ ತುಕಡಿಗಳಿಗೆ ಮಹಿಳಾ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಿಗಳು ನೇತೃತ್ವ ವಹಿಸಿರುವ ನಿದರ್ಶನಗಳಿವೆ, ಆದರೆ 140 ಕ್ಕೂ ಹೆಚ್ಚು ಪುರುಷ ಸಿಬ್ಬಂದಿಯ ತಂಡಕ್ಕೆ ಮಹಿಳಾ ಅಧಿಕಾರಿಯೊಬ್ಬರು ನೇತೃತ್ವ ವಹಿಸುವುದು ಇದೇ ಮೊದಲು ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಬಾಲಾ ಅವರು ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯವರು. ದೇಶದ ಅರೆಸೇನಾ ಪಡೆಗೆ ಸೇರಿದ ರಜೌರಿ ಜಿಲ್ಲೆಯ ಮೊದಲ ಮಹಿಳೆ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದಾರೆ. ಯುಪಿಎಸ್‌ಸಿ ನಡೆಸಿದ ಸಿಎಪಿಎಫ್ ಸಹಾಯಕ ಕಮಾಂಡೆಂಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಗುರುಗ್ರಾಮ್‌ನ ಸಿಆರ್‌ಪಿಎಫ್ ಅಕಾಡೆಮಿಯಲ್ಲಿ ಕೌಶಲ ತರಬೇತಿ ಮತ್ತು ಸಾರ್ವಜನಿಕ ಭಾಷಣ ವಿಷಯಗಳಲ್ಲಿ ಅತ್ಯುತ್ತಮ ಅಧಿಕಾರಿ ಪ್ರಶಸ್ತಿಯನ್ನು ಪಡೆದಿದ್ದಾರೆ.

2005ರ ಏಪ್ರಿಲ್‌ನಲ್ಲಿ ಮೊದಲ ಬಾರಿ ಬಾಲಾ ಅವರು ಛತ್ತೀಸಗಢದ ಬಸ್ತ್ರಿಯಾ ಬೆಟಾಲಿಯನ್‌ನಲ್ಲಿ ನಕ್ಸಲ್‌ ವಿರೋಧಿ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಸುಮಾರು 3.25 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ಸಿಆರ್‌ಪಿಎಫ್ ದೇಶದ ಅತ್ಯುನ್ನತ ಆಂತರಿಕ ಭದ್ರತಾ ಪಡೆಯಾಗಿದೆ. ಈ ಪಡೆ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ನಿಗ್ರಹ ದಾಳಿಗಳು ಮತ್ತು ಈಶಾನ್ಯದಲ್ಲಿ ದಂಗೆ ನಿಗ್ರಹಗಳ ಬಗ್ಗೆ ಗಮನ ನೀಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.