ADVERTISEMENT

ಕೋವಿಡ್‌ನಿಂದ ಮಕ್ಕಳಿಗೆ ಅಪಾಯ ಕಡಿಮೆ: ಬ್ರಿಟನ್‌ ಸಂಶೋಧಕರ ಅಧ್ಯಯನ

ಪಿಟಿಐ
Published 9 ಜುಲೈ 2021, 10:58 IST
Last Updated 9 ಜುಲೈ 2021, 10:58 IST
.
.   

ಲಂಡನ್‌: ಕೋವಿಡ್‌–19ನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗುವುದು ಮತ್ತು ಸಾವು ಸಂಭವಿಸುವ ಸಾಧ್ಯತೆ ಮಕ್ಕಳಲ್ಲಿ ಹಾಗೂ ಹದಿಹರೆಯದವರಲ್ಲಿ ಅತಿ ಕಡಿಮೆ ಎಂದು ಬ್ರಿಟನ್‌ನಲ್ಲಿ ಕೈಗೊಂಡ ಅಧ್ಯಯನ ವರದಿ ತಿಳಿಸಿದೆ.

ಯೂನಿರ್ವಸಿಟಿ ಕಾಲೇಜ್‌ ಲಂಡನ್‌ (ಯುಸಿಎಲ್‌), ಯೂನಿರ್ವಸಿಟಿ ಆಫ್‌ ಬ್ರಿಸ್ಟಾಲ್‌, ಯೂನಿವರ್ಸಿಟಿ ಆಫ್‌ ಯಾರ್ಕ್‌ ಮತ್ತು ಯೂನಿವರ್ಸಿಟಿ ಆಫ್‌ ಲಿವರ್‌ಪೂಲ್‌ನ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ತೀವ್ರ ಅಂಗವಿಕತೆಗೆ ಒಳಗಾಗಿರುವ ಯುವಕರು, ಕೋವಿಡ್‌–19ನಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ADVERTISEMENT

‘ಡಯಾಬಿಟಿಸ್‌, ಅಸ್ತಮಾ ಮತ್ತು ಹೃದ್ರೋಗದ ತೊಂದರೆ ಎದುರಿಸುತ್ತಿರುವ ಯುವಕರು ಹೆಚ್ಚು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ’ ಎಂದು ಯುಸಿಎಲ್‌ನ ಜೋಸೆಫ್‌ ವಾರ್ಡ್‌ ತಿಳಿಸಿದ್ದಾರೆ.

ಸಂಶೋಧನೆಯ ಪ್ರಾಥಮಿಕ ವರದಿಗಳನ್ನು ಬ್ರಿಟನ್‌ನ ಲಸಿಕೆ ಕುರಿತಾದ ಜಂಟಿ ಸಮಿತಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯೂಎಚ್‌ಒ) ಸಲ್ಲಿಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.