ADVERTISEMENT

ಎನ್‌ಡಿಎ ಜೊತೆಗೆ ಆರ್‌ಎಲ್‌ಡಿ ಮೈತ್ರಿ: ಜಯಂತ್‌ ಚೌಧರಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 12:16 IST
Last Updated 13 ಫೆಬ್ರುವರಿ 2024, 12:16 IST
<div class="paragraphs"><p>ಜಯಂತ್‌ ಚೌಧರಿ</p></div>

ಜಯಂತ್‌ ಚೌಧರಿ

   

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದೊಂದಿಗೆ ಕೈಜೋಡಿಸುವುದಾಗಿ ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್‌ ಚೌಧರಿ ಅವರು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಘೋಷಿಸಿದರು.  ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್‌ ಅವರಿಗೆ ‘ಭಾರತ ರತ್ನ’ ಪುರಸ್ಕಾರ ಘೋಷಣೆ ಮಾಡಿರುವುದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದೂ ತಿಳಿಸಿದರು.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಭಾರತ ರತ್ನ ಪ್ರಶಸ್ತಿಯು ನಮ್ಮ ಕುಟುಂಬ ಅಥವಾ ಪಕ್ಷಕ್ಕೆ ಸೀಮಿತವಾಗಿಲ್ಲ. ಇದು  ದೇಶದ  ಎಲ್ಲ ರೈತರು, ಯುವಕರು ಮತ್ತು  ಬಡವರಿಗೆ ಸಂದ ಗೌರವ ಎಂದು ಹೇಳಿದರು.

ADVERTISEMENT

ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಅತಿ ಕಡಿಮೆ ಸಮಯದಲ್ಲಿ ಈ ನಿರ್ಧಾರ ಕೈಗೊಳ್ಳಲೇಬೇಕಿತ್ತು ಎಂದು ಹೇಳಿದರು.

ತಮ್ಮ ನಿರ್ಧಾರದಿಂದ ಪಕ್ಷದ ಕೆಲ ನಾಯಕರು ಅಸಮಾಧಾನಗೊಂಡಿದ್ದಾರೆಯೇ ಎಂಬ ಪ್ರಶ್ನೆಗೆ, ‘ಎಲ್ಲ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿದ ನಂತರವೇ ನಿರ್ಧಾರ ತೆಗೆದುಕೊಂಡಿರುವೆ. ಕೆಲ ನಾಯಕರು ಅಸಮಾಧಾನಗೊಂಡಿದ್ದಾರೆ ಎಂಬುದು ಸುಳ್ಳು ವರದಿ. ಈ ನಿರ್ಧಾರದ ಹಿಂದೆ ದೊಡ್ಡ ಯೋಜನೆ ಇದೆ ಎಂಬುದೂ ಸತ್ಯಕ್ಕೆ ದೂರವಾದುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.