ನವದೆಹಲಿ: ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪರಿಹಾರ ಮೊತ್ತವನ್ನು ಕ್ಲೇಮ್ ಸಲ್ಲಿಸಿದವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವ ಮೂಲಕ ಪಾವತಿ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಹೀಗೆ ಮಾಡುವುದರಿಂದ ವಿಮಾ ಕಂಪನಿಗಳು ಹಾಗೂ ಕ್ಲೇಮ್ ಸಲ್ಲಿಸಿದವರು ನ್ಯಾಯಾಲಯದ ಪ್ರಕ್ರಿಯೆಗಳ ಗುದ್ದಾಟದಿಂದ ಪಾರಾಗುತ್ತಾರೆ ಎಂದು ಹೇಳಿದೆ.
ವಿಮಾ ಪರಿಹಾರ ಮೊತ್ತದ ಬಗ್ಗೆ ವಿವಾದ ಇಲ್ಲದೆ ಇದ್ದಾಗ ವಿಮಾ ಕಂಪನಿಗಳು ಮೊತ್ತವನ್ನು ಮೋಟಾರು ವಾಹನ ಅಪಘಾತ ಕ್ಲೇಮ್ ನ್ಯಾಯಮಂಡಳಿಯ ಖಾತೆಯಲ್ಲಿ ಇರಿಸುತ್ತವೆ. ಈ ಪ್ರಕ್ರಿಯೆಯನ್ನು ಪಾಲಿಸುವ ಬದಲು, ನ್ಯಾಯಮಂಡಳಿಗೆ ಮಾಹಿತಿ ಒದಗಿಸಿ, ಹಣವನ್ನು ಕ್ಲೇಮ್ ಸಲ್ಲಿಸಿದವರ ಖಾತೆಗೆ ನೇರವಾಗಿ ವರ್ಗಾಯಿಸುವ ಸೂಚನೆಯನ್ನು ಯಾವಾಗ ಬೇಕಿದ್ದರೂ ಹೊರಡಿಸಬಹುದು ಎಂದು ನ್ಯಾಯಮೂರ್ತಿ ಜೆ.ಕೆ. ಮಾಹೇಶ್ವರಿ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.