
ಪಿಟಿಐ
ಸಮರಕಲೆ ಪ್ರದರ್ಶಿಸಿದ ರೊಬೊಟ್‌ಗಳು
ಬೀಜಿಂಗ್: ಇಲ್ಲಿನ ‘ಟೆಂಪಲ್ ಆಫ್ ಹೆವನ್’ನಲ್ಲಿ ನಡೆದ ಚೀನಾದ ಹೊಸ ವರ್ಷಾಚರಣೆಯ ಸಮಾರೋಪದಲ್ಲಿ 49 ರೊಬೊಟ್‌ಗಳು ಸಮರ ಕಲೆ ಪ್ರದರ್ಶಿಸಿದವು.
‘40 ಸೆಕೆಂಡುಗಳ ವಿಡಿಯೊವನ್ನು ಚೀನಾದ ರೊಬೊಟ್ ಕಂಪನಿ ‘ಯುನಿಟ್ರಿ’ ಬಿಡುಗಡೆ ಮಾಡಿದೆ. ಜಿ–1 ಸರಣಿಯ ರೊಬೊಟ್‌ಗಳು ಸಮರಕಲೆಯ ಪಂಚ್, ಕಿಕ್, ಅತ್ಯಂತ ಕಷ್ಟಕರವಾದ ಪ್ಲಿಪ್‌ಗಳನ್ನು ಯಶಸ್ವಿಯಾಗಿ ನಡೆಸಿತು’ ಎಂದು ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.
‘ನೈಜ ಹೊಡೆತಗಳು–ಕೃತಕ ಬುದ್ಧಿಮತ್ತೆಯಿಂದ ರಚಿಸಿದ್ದಲ್ಲ’ ಎಂದು ವಿಡಿಯೊದ ಕೆಳಭಾಗದಲ್ಲಿ ಶೀರ್ಷಿಕೆ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.