ADVERTISEMENT

RS bypolls: ಹರಿಯಾಣದ ಬಿಜೆಪಿ ಅಭ್ಯರ್ಥಿ ರೇಖಾ ಶರ್ಮಾ ಅವಿರೋಧ ಆಯ್ಕೆ

ಪಿಟಿಐ
Published 13 ಡಿಸೆಂಬರ್ 2024, 11:42 IST
Last Updated 13 ಡಿಸೆಂಬರ್ 2024, 11:42 IST
<div class="paragraphs"><p>ರೇಖಾ&nbsp;ಶರ್ಮಾ&nbsp;</p></div>

ರೇಖಾ ಶರ್ಮಾ 

   

ಚಂಡೀಗಢ: ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮತ್ತು ಬಿಜೆಪಿ ನಾಯಕಿ ರೇಖಾ ಶರ್ಮಾ ಅವರು, ಹರಿಯಾಣದಿಂದ ರಾಜ್ಯಸಭೆಗೆ ನಡೆದ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಹಿಂಪಡೆಯುವ ಅವಧಿ ಅಂತ್ಯಗೊಂಡ ಕೂಡಲೇ ಅವರ ಆಯ್ಕೆಯನ್ನು ಘೋಷಿಸಲಾಗಿದೆ.

ಮಂಗಳವಾರ ರೇಖಾ ಶರ್ಮಾ ಹರಿಯಾಣದಿಂದ ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಸಲ್ಲಿಸಿದ ಏಕೈಕ ಅಭ್ಯರ್ಥಿ ಅವರಾಗಿದ್ದರು.

ಡಿಸೆಂಬರ್ 20ರ ರಾಜ್ಯಸಭೆ ಚುನಾವಣೆಗೆ ರೇಖಾ ಶರ್ಮಾ ಅವರನ್ನು ಹರಿಯಾಣದಿಂದ ಅಭ್ಯರ್ಥಿಯಾಗಿ ಬಿಜೆಪಿ ಪ್ರಕಟಿಸಿತ್ತು.

ಹರಿಯಾಣದ ಮಂತ್ರಿ ಮಹಿಪಾಲ್ ದಂಡ, ಮಾಜಿ ಸ್ಪೀಕರ್ ಜಿಯಾನ್ ಚಂದ್ ಗುಪ್ತಾ ಅವರ ಸಮ್ಮುಖದಲ್ಲಿ ರೇಖಾ ಶರ್ಮಾ ಅವರಿಗೆ ರಾಜ್ಯಸಭೆ ಸದಸ್ಯೆಯಾಗಿ ಆಯ್ಕೆಯಾದ ಪ್ರಮಾಣಪತ್ರವನ್ನು ಚುನಾವಣಾ ಅಧಿಕಾರಿ ನೀಡಿದರು.

ಈ ಉಪಚುನಾವಣೆಗೆ ಪ್ರತಿಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 48, ಕಾಂಗ್ರೆಸ್ 37, ಐಎನ್‌ಎಲ್‌ಡಿಯ ಇಬ್ಬರು, ಮೂವರು ಪಕ್ಷೇತರ ಶಾಸಕರಿದ್ದಾರೆ.

ಪಕ್ಷೇತರರು ಸಹ ಸಿಎಂ ನಾಯಬ್ ಸಿಂಗ್ ಸೈನಿಯನ್ನು ಬೆಂಬಲಿಸಿದ್ದಾರೆ.

ಕೃಷ್ಣ ಲಾಲ್ ಪನ್ವಾರ್ ಶಾಸಕರಾದ ಆಯ್ಕೆಯಾದ ಬಳಿಕ ರಾಜ್ಯಸಭಾ ಸ್ಥಾನಕ್ಕೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹರಿಯಾಣ ಸರ್ಕಾರದಲ್ಲಿ ಪನ್ವಾರ್ ಅಭಿವೃದ್ಧಿ ಮತ್ತು ಪಂಚಾಯತ್ ಸಚಿವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.