ADVERTISEMENT

ಆರ್‌ಎಸ್‌ಎಸ್ ಸಂಘಟನಾ ಸಭೆ: ಮೋಹನ ಭಾಗವತ್‌ ಗುಜರಾತ್ ಪ್ರವಾಸ ಇಂದಿನಿಂದ

ಪಿಟಿಐ
Published 26 ಸೆಪ್ಟೆಂಬರ್ 2023, 11:38 IST
Last Updated 26 ಸೆಪ್ಟೆಂಬರ್ 2023, 11:38 IST
ಮೋಹನ ಭಾಗವತ್‌
ಮೋಹನ ಭಾಗವತ್‌   

ಅಹಮದಾಬಾದ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನಾ ಸಭೆ ಹಾಗೂ ಇನ್ನಿತರ ಸಭೆಗಳಲ್ಲಿ ಭಾಗವಹಿಸಲು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. 

ಆರ್‌ಎಸ್‌ಎಸ್ ಸಂಘಟನಾ ಸಭೆ ಸೆ. 29ರಿಂದ ಅ. 1ರವರೆಗೆ ಅಹಮದಾಬಾದ್‌ನಲ್ಲಿ ಆಯೋಜನೆಗೊಂಡಿದೆ. ಮಂಗಳವಾರ ಸಂಜೆ ಸೂರತ್‌ಗೆ ಭಾಗವತ್ ಬಂದಿಳಿಯಲಿದ್ದಾರೆ. ಅಂಗಾಂಗ ದಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡೊನೇಟ್ ಲೈಫ್ ಎಂಬ ಸ್ವಯಂ ಸೇವಾ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂಗಾಂಗ ದಾನ ಮಾಡಿದ 70 ವ್ಯಕ್ತಿಗಳ ಕುಟುಂಬಗಳನ್ನು ಮೋಹನ ಭಾಗವತ್ ಸನ್ಮಾನಿಸಲಿದ್ದಾರೆ ಎಂದು ಗುಜರಾತ್‌ನ ಆರ್‌ಎಸ್‌ಎಸ್ ಮಾಧ್ಯಮ ಉಸ್ತುವಾರಿ ವಿಜಯ್ ಥಾಕರ್ ತಿಳಿಸಿದ್ದಾರೆ.

ಸೆ. 28ರಂದು ಅಹಮದಾಬಾದ್‌ನಲ್ಲಿ ಆಯೋಜಿಸಲಾಗಿರುವ ಯಂಗ್ ಪ್ರೆಸಿಡೆಂಟ್ಸ್‌ ಆರ್ಗನೈಸೇಷನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆ. 29ರಿಂದ ನಡೆಯಲಿರುವ ಆರ್‌ಎಸ್‌ಎಸ್‌ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಲಿರುವ ಭಾಗವತ್, ಗುಜರಾತ್‌ನಲ್ಲಿ ಸಂಘದ ಕಾರ್ಯ ಚಟುವಟಿಕೆ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.