ಮೋಹನ್ ಭಾಗವತ್–ಪಿಟಿಐ ಚಿತ್ರ
ನಾಗ್ಪುರ: ‘ಸಂಘದ ಪ್ರಾರ್ಥನೆಯು ದೇಶ ಹಾಗೂ ದೇವರ ಕಡೆಗೆ ಸ್ವಯಂಸೇವಕರ ಸಾಮೂಹಿಕ ಸಂಕಲ್ಪವಾಗಿದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ನಾಗ್ಪುರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗಾಯಕ ಶಂಕರ್ ಮಹದೇವನ್ ಅವರು ಹಾಡಿರುವ ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆಯ ಹಿಂದಿ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಆ ಹಾಡಿನ ಅರ್ಥ ವಿವರಣೆಯನ್ನು ಹಿಂದಿಯಲ್ಲಿ ಹರೀಶ್ ಭಿಮಾನಿ ಹಾಗೂ ಮರಾಠಿಯಲ್ಲಿ ನಟ ಸಚಿನ್ ಖೇಡೇಕರ್ ನೀಡಿದ್ದಾರೆ.
‘ಪ್ರಾರ್ಥನೆಯು ಭಾರತ ಮಾತೆಗೆ ಸಲ್ಲಿಸುವ ಭಕ್ತಿ, ಪ್ರೀತಿ ಹಾಗೂ ತ್ಯಾಗದ ಸಂಕೇತವಾಗಿದೆ. ನಾವು ದೇಶಕ್ಕಾಗಿ ಏನು ನೀಡುತ್ತೇವೆಯೋ, ದೇಶಕ್ಕಾಗಿ ಸೇವೆ ಸಲ್ಲಿಸಲು ದೇವರು ಕೂಡ ನಮಗೆ ನೆರವಾಗುತ್ತಾನೆ’ ಎಂದು ತಿಳಿಸಿದರು.
‘ಆಡಿಯೊ ಬಿಡುಗಡೆಯ ಮೂಲಕ ಈ ಪ್ರಾರ್ಥನೆಯೂ ಗರಿಷ್ಠ ಮಂದಿಯನ್ನು ತಲುಪಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.